ಹೊಸನಗರದಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ |  ಹಚ್ಚಿಟ್ಟಿರುವ ಬೆಳ್ಳಿ ಹಣತೆಯಂತೆ ನಮ್ಮ ಸಂವಿಧಾನ ; ತಹಶೀಲ್ದಾರ್ ರಶ್ಮಿ ಹಾಲೇಶ್

Written by Mahesha Hindlemane

Published on:

ಹೊಸನಗರ ; ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಗಮನದಲ್ಲಿಟ್ಟುಕೊಂಡು ಅವರ ಬಾಳನ್ನು ರೂಪಿಸಲೆಂದು ಹಚ್ಚಿಟ್ಟಿರುವ ಬೆಳ್ಳಿ ಹಣತೆಯಂತೆ ನಮ್ಮ ಸಂವಿಧಾನ ಎಂದು ಹೊಸನಗರದ ತಹಶೀಲ್ದಾರ್ ರಶ್ಮಿ ಹಾಲೇಶ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿ ಏರ್ಪಡಿಸಿದ್ದ 76ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/18aWPatkqv/

ವಿಶ್ವ ಭೂಪಟದಲ್ಲಿ ಹಲವು ಭಾಷೆ ಧರ್ಮ, ಪ್ರಾಂತ್ಯಗಳಿಂದ ಕೂಡಿರುವ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ನಮ್ಮ ಭಾರತ. ಐಕ್ಯತೆ ಸಮಗ್ರತೆ ಕಾಪಡಿಕೊಳ್ಳುವ ಮೂಲಕ ಸದೃಡ ರಾಷ್ಟ್ರವಾಗಿ ನಮ್ಮ ದೇಶ ಬೆಳೆದು ನಿಂತಿದೆ ಸಮಾಜದ ಶ್ರೇಯೋಭಿವೃದ್ಧಿ ನಮ್ಮ ಸಂವಿಧಾನದ ಅಂತಿಮ ಆಶಯ ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಮಾತನ್ನು ಅರಿತು ಅಭಿವೃದ್ಧಿಯ ಪಥದಲ್ಲಿ ದಾಪುಗಾಲಿಡುತ್ತಿದ್ದೇವೆ. ಅವರ ನುಡಿಗಳ ಆಶಯದಂತೆ ನಡೆದುಕೊಳ್ಳಲು ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದ್ದೇವೆ ನಾವು ನೀವೆಲ್ಲರೂ ಅಭಿವೃದ್ಧಿಯೊಂದಿಗೆ ಭಾರತವನ್ನು ಸಶಕ್ತ ಸದೃಡ ಪ್ರಜಾಪ್ರಭುತ್ವವಾಗಿ ರೂಪಿಸಲು ಶ್ರಮಿಸೋಣ.

ಗುರುದೇವ ರವೀಂದ್ರನಾಥ ಠಾಗೋರರು ಹೇಳಿದಂತೆ ಮೇಲು ಕೀಳು ಬಡವ ಬಲ್ಲಿಗನೆಂಬ ಭೇದ ಮರೆತು ಸಹಬಾಳ್ವೆಯ ರಾಷ್ಟ್ರ ನಿರ್ಮಾಣ ಮಾಡೋಣ ಸ್ನೇಹ, ಪ್ರೀತಿ ಸೋದರ ಭಾವದ ನೆಲೆ ನಮ್ಮ ಜೀವಾಳವಾಗಲಿ ಸಂವಿಧಾನದ ಪ್ರಸ್ತಾವನೆಯ ಆಶಯಗಳು ಇನ್ನಷ್ಟು ಸಾಕಾರವಾಗಲಿ 76ನೇ ಗಣರಾಜ್ಯೋತ್ಸವದ ಈ ಸಂಭ್ರಮದಲ್ಲಿ ಹೊಸ ನಾಳೆಯ ನಿರ್ಮಾಣದ ನಮ್ಮ ಹಿರಿಯರು ಕಂಡ ಕನಸನ್ನು ಇನ್ನಷ್ಟು ಸಾಕಾರವಾಗಿಸುವ ಪಣ ತೊಡೋಣ ಎಂದರು.

ಕಾಲಾನುಸಾರ ಕಾಯ್ದೆಗಳ ತಿದ್ದುಪಡಿಗೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ದೇಶದ ಕಾನೂನು, ಕಾಯ್ದೆಗಳ ಬಗ್ಗೆ ಗೌರವಿಸುವ ಮುನ್ನ ವಿಶ್ವ ಬೇರೆ ರಾಷ್ಟ್ರಗಳ ಕಾನೂನು ಕಟ್ಟಳೆ ಕುರಿತು ನಾವೆಲ್ಲ ಮೊದಲು ತಿಳಿಯಬೇಕು. ಸಂವಿಧಾನದಿಂದ ನಾವೆಲ್ಲಾ ಸರ್ವ ಸ್ವತಂತ್ರರಾಗಿದ್ದು ನಮ್ಮ ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವಕ್ಕೆ ಬಹುಮುಖಿ ಮಹತ್ವವಿದೆ. ಕಾರಣ, ದೇಶದ ಸರ್ವೋಚ್ಛ ಕಾನೂನಾದ ಸಂವಿಧಾನ ಕುರಿತು ನಮ್ಮ ಹಿರಿಯರು ಆಳವಾದ ಅಧ್ಯಯನದ ಬಳಿಕ ಜಾರಿಗೊಳಿಸಿದ್ದಾರೆ. ಸಂವಿಧಾನವು ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರಜಾಸತ್ತಾತ್ಮಕ ಆದರ್ಶಗಳಿಗೆ ಮಾನ್ಯತೆ ನೀಡಿದೆ ಎಂದರು.

ಈ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮಕ್ಕಳಿಂದ ಪಥ ಸಂಚಾಲನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ವಿವಿಧ ರೀತಿಯಲ್ಲಿ ತಾಲ್ಲೂಕಿಗೆ ಕೀರ್ತಿ ತಂದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರೆಂದ್ರಕುಮಾರ್, ಹೊಸನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಗುರಣ್ಣ ಎಸ್ ಹೆಬ್ಬಾಳ್, ಎಸ್.ಐ ಶಂಕರಗೌಡ ಪಾಟೀಲ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಉಮೇಶ್, ಕ್ಷೇತ್ರಾ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷೆ ಚಂದ್ರಕಲಾ ನಾಗರಾಜ್, ನಾಡಹಬ್ಬಗಳ ಸಮಿತಿಯ ಸದಸ್ಯರಾದ ಶ್ರೀನಿವಾಸ್ ಕಾಮತ್, ಶ್ರೀಧರ ಉಡುಪ, ರಾಜಮೂರ್ತಿ, ವರ್ತಕರ ಸಂಘದ ಅಧ್ಯಕ್ಷರಾದ ವಿಜೇಂದ್ರ ಶೇಟ್, ತಾಲ್ಲೂಕು, ಗ್ರೇಡ್ 2ತಹಶೀಲ್ದಾರ್ ರಾಕೇಶ್, ಚಿರಾಗ್, ಆರ್.ಐ ಆಂಜನೇಯ, ದೈಹಿಕ ಶಿಕ್ಷಕ ಸಂಘದ ರಾಜುಶೆಟ್ಟಿ, ಗ್ರಾಮ ಆಡಳಿತಾಧಿಕಾರಿ ಲೋಹಿತ್, ಸಿದ್ದಪ್ಪ, ಕಮಲಕರ್, ಧನಂಜಯ, ರೇಣುಕೇಶ್, ನೌಕರರ ಸಂಘದ ಅಧ್ಯಕ್ಷ ಸೋಮಶೇಖರ್, ಸುಹಾಸ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಯಾಸೀರ್, ಪಟ್ಟಣ ಪಂಚಾಯಿತಿಯ ಎಲ್ಲ ಸದಸ್ಯರು, ತಾಲ್ಲೂಕು ಕಛೇರಿಯ ಎಲ್ಲ ನೌಕರ ವರ್ಗ, ತಾಲ್ಲೂಕು ಪಂಚಾಯಿತಿಯ ಎಲ್ಲ ನೌಕರ ವರ್ಗ ವಿವಿಧ ಇಲಾಖೆಯ ಸರ್ಕಾರಿ ನೌಕರ ವರ್ಗ, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷ ಸದಸ್ಯರುಗಳು ಹಾಗೂ ಸರ್ಕಾರಿ ಹಾಗೂ ಖಾಸಗಿ ಶಾಲೆಯ ದೈಹಿಕ ಶಿಕ್ಷಕ ವೃಂದ ಹಾಹೂ ಎಲ್ಲ ಸರ್ಕಾರಿ ಶಾಲೆಯ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನೀಯರು ಆಗಮಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.

Leave a Comment