ಹೊಸನಗರ ; ಅಪಘಾತದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಎನ್.ಡಿ.ಎಫ್.ಆರ್ ಸಿಬ್ಬಂದಿಗಳಿಂದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.
ಎನ್.ಡಿ.ಎಫ್.ಆರ್ ಸಿಬ್ಬಂದಿಗಳಿಂದ ಕುಮಾರ್ ಎನ್ನುವ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು ಮೂಗಿನಲ್ಲಿ ರಕ್ತ ಬರುವ ಹಾಗೆ ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆ.

ಮಹಾರಾಷ್ಟ್ರದಿಂದ ಹೊಸನಗರ ಅಗ್ನಿಶಾಮಕ ಸಿಬ್ಬಂದಿಗಳಿಗೆ ತರಬೇತಿ ನೀಡಲು ಎನ್.ಡಿ.ಆರ್.ಎಫ್ ಟೀಂ ಬಂದಿತ್ತು. ನಾಲ್ಕೈದು ಜನ ಸಿಬ್ಬಂದಿಗಳಿಂದ ಕುಮಾರ್ ಎನ್ನುವ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ಡಿಸೇಲ್ ಹಾಕಿಸಲು ನಿಂತಿದ್ದ ಪಿಕಪ್ ವಾಹನಕ್ಕೆ ಎನ್.ಡಿ.ಎಫ್.ಆರ್ ಸಿಬ್ಬಂದಿಗಳ ವಾಹನ ಡಿಕ್ಕಿ ಹೊಡೆದಿದೆ. ಈ ಅಪಘಾತದ ಬಗ್ಗೆ ಪ್ರಶ್ನೆ ಮಾಡಿದ ಪಿಕಪ್ ವಾಹನದವನಿಗೆ ಅವಾಚ್ಯ ಶಬ್ದಗಳಿಂದ ಸಿಬ್ಬಂದಿಗಳು ನಿಂದಿಸಿದ್ದಾರೆ. ಪಿಕಪ್ ಚಾಲಕನಿಗೆ ಯಾಕೇ ನಿಂದನೆ ಮಾಡುತ್ತಿದ್ದೀರಾ? ಎಂದು ಕುಮಾರ್ ಪ್ರಶ್ನೆ ಮಾಡಿದಕ್ಕೆ, ನೀನು ಯಾರು ಪ್ರಶ್ನೆ ಮಾಡಲು? ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಸಿಬ್ಬಂದಿಗಳು ಕುಮಾರ್ ಎಂಬುವನಿಗೆ ಹಲ್ಲೆ ಮಾಡಿದ್ದಾರೆ.

ಗಂಭೀರ ಗಾಯಗೊಂಡ ಕುಮಾರ್ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.