ನನ್ನ ಕನ್ನಡಕದ ಬಗ್ಗೆ ಮಾತಾಡಿದವರೆಲ್ಲ ಮಣ್ಣು ಮುಕ್ಕಿದ್ದಾರೆ ; ಜೋಗ ಅಭಿವೃದ್ಧಿ ಬಗ್ಗೆ ಸಂಸದ ರಾಘವೇಂದ್ರ ಹೇಳಿಕೆಗೆ ಬೇಳೂರು ಗೋಪಾಲಕೃಷ್ಣ ತಿರುಗೇಟು

Written by malnadtimes.com

Updated on:

ಶಿವಮೊಗ್ಗ ; ಜೋಗ ಅಭಿವೃದ್ದಿ ವಿಚಾರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ನೀಡಿದ ಹೇಳಿಕೆಗೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ತಿರುಗೇಟು ನೀಡಿ, ಜೋಗ ಅಭಿವೃದ್ದಿಗೆ ಹೆಚ್ಚಿನ ಹಣ ತಂದಿದ್ದು ನಾವು, ಅವರಲ್ಲ ಎಂದು ದಾಖಲೆ ಸಮೇತ ಉತ್ತರಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಜೋಗ ಅಭಿವೃದ್ಧಿ ಬಿಎಸ್‌ವೈ ಅವರ ಕನಸಾಗಿರಬಹುದು, ಅದನ್ನು ನನಸಾಗಿಸಿದ್ದು ನಾವು. ಬಿಜೆಪಿ ಅವಧಿಯಲ್ಲಿ 15 ಕೋಟಿ ರೂ. ಬಿಡುಗಡೆ ಆಗಿತ್ತು, ನಮ್ಮ ಅವಧಿಯಲ್ಲಿ 75 ಕೋಟಿ ರೂ.ಬಿಡುಗಡೆ ಆಗಿದೆ. ಒಟ್ಟು 140 ಕೋಟಿ ರೂ.ವೆಚ್ಚದ ಕಾಮಗಾರಿ ನಡೆದಿದೆ ಎಂದಿದ್ದಾರೆ.

ಮಿಸ್ಟರ್ ಬಸ್ ಸ್ಟ್ಯಾಂಡ್ ರಾಘುರವರೇ, ಕನಸು ಕಾಣೋದು ಮುಖ್ಯವಲ್ಲ. ನನಸು ಮಾಡುವಂತೆ ಕೆಲಸವಾಗಬೇಕು. ಕನ್ನಡಕ ಮೊದಲು 10 ಕೋಟಿ ರೂ. ಬಿಡುಗಡೆ ಮಾಡಿದ್ದು, ಆನಂತರ ನೀವು 5 ಕೋಟಿ ರೂ. ಬಿಡುಗಡೆ ಮಾಡಿದ್ದೀರಿ. ಉಳಿದ ಹಣವೆಲ್ಲಾ ನನಸು ಮಾಡಿದ್ದು ಗೋಪಾಲಕೃಷ್ಣ ಬೇಳೂರು. ಅಲ್ಲಿ ಕಮಲದ ಹೂವು ಮಾಡೋಕೆ ಹೊರಟಿದ್ದಿರಲ್ಲ, ಅದನ್ನ ಕಿತ್ತು ಬಿಸಾಕಿ ಹೊಸ ಕೆಲಸ 160 ಕೋಟಿದು ಆಗಿದೆ. ಜೋಗ ಅಭಿವೃದ್ಧಿಗೆ 90 ಕೋಟಿ ನಾನೇ ಕೊಡಿಸಿದ್ದು. ಸಿಂಗಾಪುರ ಪ್ರವಾಸದ ಮೂಲಕ ಜೋಗ ಅಭಿವೃದ್ಧಿಗೆ ಕಳೆ ಕಟ್ಟಲಾಗುವುದು.

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/16WmB2nv1p/

ನಿಮ್ಮ ಸಿಗಂದೂರು ಸೇತುವೆ ಬಿಂಬಿಸಿಕೊಂಡಿದ್ದೀರಿ, ನಾವು ನಮ್ಮ ಕೆಲಸ ಬಿಂಬಿಸಿಕೊಳ್ಳೋದು ಬೇಡವೇ? ಬಸ್ ಸ್ಟ್ಯಾಂಡ್ ರಾಘುರವರೇ… ಜೋಗ ಡ್ಯಾಂ ಕೆಳಗೆ ಕೆಆರ್‍ಎಸ್ ಕನಸು ಕಂಡಿದ್ದು ನಾನು. ನನ್ನ ಕನ್ನಡಕದ ಬಗ್ಗೆ ಮಾತಾಡಿದವರೆಲ್ಲ ಮಣ್ಣು ಮುಕ್ಕಿದ್ದಾರೆ. ಕನ್ನಡಕ, ಬಟ್ಟೆ ಹಾಕುವುದೆಲ್ಲ ನನ್ನ ಹಕ್ಕು. ಶರಾವತಿ ಮುಳುಗಡೆಯಿಂದ ರೈತರು ವಿಷ ಕುಡಿಯೋ ಪರಿಸ್ಥಿತಿ ಬಗ್ಗೆ ಪಾರ್ಲಿಮೆಂಟಲ್ಲಿ ಮಾತಾಡಿದ್ರೆ ಮುಗೀತಾ ? ಹಿಂದುಳಿದ ವರ್ಗದವರೇ ಇರೋ ಜನ ಶರಾವತಿ ಮುಳುಗಡೆಯವರು. ಹಾಗಾಗಿ, ರಾಘವೇಂದ್ರರಿಗೆ ಆಸಕ್ತಿ ಇಲ್ಲ ಎಂದು ಟೀಕಿಸಿದ್ದಾರೆ.

ನಮ್ಮ ಸರ್ಕಾರ ಶರಾವತಿ ಸಂತ್ರಸ್ತರನ್ನು ಉಳಿಸಿಕೊಳ್ಳೋ ಪ್ರಯತ್ನ ಮಾಡುತ್ತಿದೆ. ರೈತರಿಗೆ ದ್ರೋಹ ಮಾಡುವ ಕೆಲಸ ರಾಘವೇಂದ್ರ, ಹಾಲಪ್ಪ, ಆರಗ ಜ್ಞಾನೇಂದ್ರ ಮಾಡಿದ್ದಾರೆ. ಸಚಿವ ಮಧು ಬಂಗಾರಪ್ಪರನ್ನು ಅಭಿನಂದಿಸುತ್ತೇನೆ. ಮುಳುಗಡೆ ರೈತರ ಪರ ಕೆಲಸ ಮಾಡುತ್ತಿರೋ ಕ್ರೆಡಿಟ್ ರಾಜ್ಯ ಸರ್ಕಾರಕ್ಕೆ, ಮಧು ಬಂಗಾರಪ್ಪರಿಗೆ, ಬೇಳೂರಿಗೆ ಸಿಗಬೇಕು. ಏಳು ವರ್ಷ ಮಾತಾಡದ ಸಂಸದರು ನನಗೆ ಪಾಠ ಹೇಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಡ್ಯೂಪ್ಲಿಕೇಟ್ ಸಹಿ ಮಾಡಿ ಯಡಿಯೂರಪ್ಪರಿಗೆ ಜೈಲಿಗೆ ಕಳಿಸಿದ್ದು ಅಪ್ಪ ಮಕ್ಕಳು. ಮುಸ್ಲಿಂ, ಕ್ರಿಶ್ಚಿಯನ್ನರು ಏನೇ ಮಾಡಿದ್ರೂ ಬಿಜೆಪಿಯವರಿಗೆ ದೇಶ ದ್ರೋಹಿಗಳೇ. ಕಾಲೇಜಿನ ಜಾಗ ಫಾರೆಸ್ಟ್ ಆಗಿದ್ದು, ಡೀನೋಟಿಫೈ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಸಾಯಿ ಗಾರ್ಮೆಂಟ್ಸ್ ವಿಷಯದಲ್ಲೂ ಅಪ್ಪ-ಮಕ್ಕಳು ಸೂಟ್ ಕೇಸ್ ತಗೊಂಡಿದ್ದಾರೆ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರ ಗಂಭೀರ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿಯವರು ನಿಮ್ಮ ಮಗನನ್ನೇ ಮುಗಿಸಲು ಹೊರಟಿದ್ದಾರೆ. ಯಡಿಯೂರಪ್ಪ ಕಾಂಗ್ರೆಸ್ಸನ್ನು ಮುಗಿಸುವ ಮಾತನ್ನು ಈ ವಯಸ್ಸಲ್ಲಿ ಆಡಿದ್ದಾರೆ. ನಮ್ಮ ಪಕ್ಷ ಮುಗಿಸಲು ನಿಮ್ಮಿಂದ ಸಾಧ್ಯವೇ ಇಲ್ಲ ಎಂದು ಹೇಳಿದರು.

Leave a Comment