ಆಡಿಕೃತ್ತಿಕೆ ಜಾತ್ರೆ: ಆಗಸ್ಟ್ 16ರಂದು ಶಿವಮೊಗ್ಗದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ

Written by Koushik G K

Published on:

ಶಿವಮೊಗ್ಗ: ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಆಡಿಕೃತ್ತಿಕೆ ಹರೋಹರ ಜಾತ್ರೆಯ ವೇಳೆ ಭಕ್ತರ ಹೆಚ್ಚಿನ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಆಗಸ್ಟ್ 16ರಂದು ಬೆಳಿಗ್ಗೆ 6.00 ರಿಂದ ರಾತ್ರಿ 10.00ರವರೆಗೆ ಶಿವಮೊಗ್ಗದಲ್ಲಿ ತಾತ್ಕಾಲಿಕ ವಾಹನ ಸಂಚಾರ ನಿಷೇಧ ಮತ್ತು ಮಾರ್ಗ ಬದಲಾವಣೆ ಜಾರಿಗೆ ಬರಲಿದೆ. ಈ ಕುರಿತು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ವಾಹನ ಸಂಚಾರ ಬದಲಾವಣೆ ವಿವರಗಳು:

  • ಬೆಂಗಳೂರು, ಭದ್ರಾವತಿ, ಎನ್.ಆರ್.ಪುರ ದಿಕ್ಕಿನಿಂದ ಬರುವ ಎಲ್ಲಾ ಭಾರೀ ವಾಹನಗಳು, ಬಸ್‌ಗಳು ಮತ್ತು ಕಾರುಗಳು: ಎಂ.ಆರ್.ಎಸ್ ಸರ್ಕಲ್‌ನಿಂದ ಬೈಪಾಸ್ ರಸ್ತೆ ಮೂಲಕ ಸಾಗಬೇಕು.
  • ಶಿವಮೊಗ್ಗ ನಗರದಿಂದ ಬೆಂಗಳೂರು, ಭದ್ರಾವತಿ, ಚಿತ್ರದುರ್ಗ, ಹೊಳೆಹೊನ್ನೂರು ದಿಕ್ಕಿಗೆ ಹೋಗುವ ಎಲ್ಲಾ ಭಾರೀ ವಾಹನಗಳು ಮತ್ತು ಬಸ್‌ಗಳು: ಬೈಪಾಸ್ ರಸ್ತೆ, ಎಂ.ಆರ್.ಎಸ್ ಸರ್ಕಲ್ ಮೂಲಕ ಸಾಗಬೇಕು.
  • ಚಿತ್ರದುರ್ಗ, ಹೊಳೆಹೊನ್ನೂರು ದಿಕ್ಕಿನಿಂದ ನಗರಕ್ಕೆ ಬರುವ/ಹೊರಹೋಗುವ ಎಲ್ಲಾ ಭಾರೀ ವಾಹನಗಳು ಮತ್ತು ಬಸ್‌ಗಳು: ಭದ್ರಾವತಿ ಮಾರ್ಗವಾಗಿ ಬೈಪಾಸ್ ರಸ್ತೆ ಬಳಸಿ ಪ್ರಯಾಣಿಸಬೇಕು.
  • ಚಿತ್ರದುರ್ಗ, ಹೊಳೆಹೊನ್ನೂರಿನಿಂದ ಬರುವ/ಹೋಗುವ ಲಘು ವಾಹನಗಳು: ಪಿಳ್ಳಂಗಿರಿ ಕ್ರಾಸ್ ಅಥವಾ ಹೊಳಬೆನವಳ್ಳಿ ತಾಂಡ ಕ್ರಾಸ್‌ನಿಂದ ಯಲವಟ್ಟಿ ಮಾರ್ಗವಾಗಿ ಮಲವಗೊಪ್ಪ ಮೂಲಕ ಬಿ.ಹೆಚ್. ರಸ್ತೆ ಸೇರಿ, ನಂತರ ಬೈಪಾಸ್ ರಸ್ತೆ ಬಳಸಿ ಸಾಗಬೇಕು.
  • ಶಿವಮೊಗ್ಗದಿಂದ ಹೊಳೆಹೊನ್ನೂರು, ಚಿತ್ರದುರ್ಗ ದಿಕ್ಕಿಗೆ ಹೋಗುವ ಲಘು ವಾಹನಗಳು: ಬೈಪಾಸ್ ರಸ್ತೆ ಮೂಲಕ ಮಲವಗೊಪ್ಪ ಯಲವಟ್ಟಿ ಕ್ರಾಸ್ – ಪಿಳ್ಳಂಗಿರಿ ಕ್ರಾಸ್ ಮೂಲಕ ಸಾಗಬೇಕು.
  • ಹರಿಹರ, ಹೊನ್ನಾಳಿ ದಿಕ್ಕಿನಿಂದ ಬರುವ ಎಲ್ಲಾ ಭಾರೀ ವಾಹನಗಳು ಮತ್ತು ಬಸ್‌ಗಳು: ಸಂಗೊಳ್ಳಿ ರಾಯಣ್ಣ ಸರ್ಕಲ್ – ಕೆ.ಇ.ಬಿ ಸರ್ಕಲ್ – ಉಷಾ ನರ್ಸಿಂಗ್ ಹೋಂ ಸರ್ಕಲ್ – 100 ಅಡಿ ರಸ್ತೆ – ವಿನೋಬನಗರ ಮಾರ್ಗವಾಗಿ ಸಾಗಬೇಕು.
  • ಹೊಳೆಹೊನ್ನೂರು ಸರ್ಕಲ್‌ನಿಂದ ಗುರುಪುರದ ಯಲವಟ್ಟಿ ಕ್ರಾಸ್‌ವರೆಗೆ: ಸಾರ್ವಜನಿಕ ವಾಹನ ಸಂಚಾರ ಸಂಪೂರ್ಣ ನಿಷೇಧ.

ಪೊಲೀಸ್ ವಾಹನಗಳು, ಅತಿಥಿ ,ಗಣ್ಯರ ವಾಹನಗಳು, ಆಂಬುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

Leave a Comment