ಶಿವಮೊಗ್ಗ : ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿದ ಮಾವಿನ ಮರ – ಪ್ರಯಾಣಿಕರಿಗೆ ಗಾಯ

Written by Koushik G K

Published on:

ಶಿವಮೊಗ್ಗ: ತಾಲೂಕಿನ ಚಿನ್ನಮನೆ ಸಮೀಪ ಭೀಕರ ಅಪಘಾತ ಸಂಭವಿಸಿದೆ. ಮಧ್ಯಾಹ್ನ ವೇಳೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಆಕಸ್ಮಿಕವಾಗಿ ಮಾವಿನ ಮರ ಉರುಳಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಘಟನೆ ವಿವರ

📢 Stay Updated! Join our WhatsApp Channel Now →

ಕಾರು ಶಿವಮೊಗ್ಗದಿಂದ ಆಯನೂರು ಮಾರ್ಗವಾಗಿ ರಿಪ್ಪನ್‌ಪೇಟೆ ಕಡೆಗೆ ತೆರಳುತ್ತಿತ್ತು.ಹೆದ್ದಾರಿಯಲ್ಲಿ ಸಾಗುವಾಗ ಹಳೆಯ ಮಾವಿನ ಮರವು ಆಕಸ್ಮಿಕವಾಗಿ ಉರುಳಿದ ಪರಿಣಾಮ ಕಾರಿನ ಮೇಲ್ಭಾಗ ಸಂಪೂರ್ಣ ಹಾನಿಯಾಗಿದೆ.ಕಾರಿನ ಗಾಜುಗಳು ಒಡೆದುಹೋಗಿದ್ದು, ಕಾರಿನ ಒಳಗಿನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಕಾರಿನ ಮೇಲ್ಭಾಗ ಸಂಪೂರ್ಣ ಕುಸಿದು ಹೋಗಿದೆ.ಗಾಜುಗಳು ಚೂರಾಗಿ ಹಾನಿಯಾಗಿದೆ.ಅದೃಷ್ಟವಶಾತ್ ಪ್ರಯಾಣಿಕರಿಗೆ ಗಂಭೀರ ಗಾಯವಾಗದೇ ಅಪಾಯದಿಂದ ಪಾರಾಗಿದ್ದಾರೆ.

ಸ್ಥಳೀಯರ ಸಹಾಯ

ಘಟನೆಯ ನಂತರ ಸ್ಥಳೀಯರು ಹಾಗೂ ಇತರೆ ವಾಹನ ಸವಾರರು ಕೂಡಲೇ ನೆರವಿಗೆ ಧಾವಿಸಿ ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಗಾಯಗೊಂಡವರನ್ನು ತಕ್ಷಣ ಆಯನೂರು ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಹಳೆಯ ಮರಗಳಿರುವ ರಸ್ತೆಯಲ್ಲಿ ವಾಹನ ಚಾಲಕರು ಎಚ್ಚರಿಕೆಯಿಂದ ಸಾಗಬೇಕು

ಪ್ರಾಣಿ ಬೇಟೆಗೆ ಹೊಂಚು ; ಮೂವರು ಆರೋಪಿಗಳ ಬಂಧನ !

Leave a Comment