ಲಾರಿ ಡಿಕ್ಕಿ, ಬಸ್‌ಗಾಗಿ ಕಾಯುತ್ತಿದ್ದ ಶಿಕ್ಷಕಿ ಸಾವು !

Written by Mahesha Hindlemane

Published on:

SAGARA ; ಬಸ್‌ಗಾಗಿ ಕಾಯುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದು ಶಿಕ್ಷಕಿ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಸಮೀಪ ಶುಕ್ರವಾರ ಬೆಳಗ್ಗೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮೃತ ಶಿಕ್ಷಕಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ  ತಾಲ್ಲೂಕಿನ ಸಿರವಂತೆಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಕುಂತಲಾ (29) ಎಂದು ಗುರುತಿಸಲಾಗಿದೆ.

ಶಿವಮೊಗ್ಗದಲ್ಲಿ ನಡೆಯುತ್ತಿದ್ದ ತರಬೇತಿಗೆ ಹೊರಟಿದ್ದ ಅವರು, ಚನ್ನಗಿರಿಯ ಮಾವಿನಕಟ್ಟೆಯಲ್ಲಿ ಬಸ್‌ಗಾಗಿ ಕಾಯುತ್ತಿದ್ದರು, ಈ ವೇಳೆ ಲಾರಿಯೊಂದು ಶಕುಂತಲಾ ಅವರಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಶಕುಂತಲಾ ಅವರು ಇದೇ ವರ್ಷ ನೇಮಕಗೊಂಡು ಸಿರವಂತೆ ಶಾಲೆಯಲ್ಲಿ ಜಿಪಿಟಿ ಶಿಕ್ಷಕಿಯಾಗಿ ಇಂಗ್ಲಿಷ್ ವಿಷಯ ಬೋಧಿಸುತ್ತಿದ್ದರು.

Leave a Comment