ಹೊಸನಗರ : ಹುಂಚ ಹೋಬಳಿಯ ಅಮೃತ ಗ್ರಾಮದ ಪ್ರಸಿದ್ಧ ಶ್ರೀ ಬಳ್ಳೇಶ್ವರ ದೇವಸ್ಥಾನದಲ್ಲಿ ಅರ್ಚಕರ ಹುದ್ದೆ ಖಾಲಿಯಿದ್ದು, ಅದಕ್ಕಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಜುಲೈ 13ರ ಒಳಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಹೊಸನಗರ ತಹಸೀಲ್ದಾರ್ ರಶ್ಮಿ ಹಾಲೇಶ್, “ದೇವಾಲಯವು ಮುಜಾರಾಯಿ ಇಲಾಖೆಗೆ ಸೇರಿದ್ದು, ಪ್ರವರ್ಗ ಸಿ ದೇವಸ್ಥಾನವಾಗಿದೆ. ಅರ್ಚಕರ ಹುದ್ದೆ ಖಾಲಿಯಿರುವ ಹಿನ್ನೆಲೆಯಲ್ಲಿ ಈ ಹುದ್ದೆ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗುತ್ತಿದೆ,” ಎಂದು ತಿಳಿಸಿದರು.
ಅರ್ಜಿ ಸಲ್ಲಿಸಲು ಆಸಕ್ತರು ತಮ್ಮ ದಾಖಲೆಗಳೊಂದಿಗೆ ತಾಲ್ಲೂಕು ಕಚೇರಿಗೆ (ಹೊಸನಗರ) ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜುಲೈ 13, 2025 ಕೊನೆಯ ದಿನಾಂಕವಾಗಿದೆ .