ರಿಪ್ಪನ್‌ಪೇಟೆ ; ರಾಮನಗರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಮೊಗ್ಗ ಜಿಲ್ಲೆ ಗರ್ತಿಕೆರೆ ಸಮೀಪದ ತಾರಿಗ ಗ್ರಾಮದ ಬಿ.ವಿ.ಸುರೇಶ ಇವರಿಗೆ ಮುಖ್ಯಮಂತ್ರಿ ಪದಕ ಲಭಿಸಿದಕ್ಕೆ ಹುಟ್ಟೂರಿನಲ್ಲಿ ನಾಗರಿಕರು ಸನ್ಮಾನಿಸಿ ಅಭಿನಂದಿಸಿದರು.
ರಿಪ್ಪನ್‌ಪೇಟೆ ಸಮೀಪದ ಗರ್ತೀಕೆರೆಯಲ್ಲಿ ಸನ್ಮಾನ ಸಮಾರಂಭದ ಸಮಿತಿಯವರು ಆಯೋಜಿಸಲಾದ ಮುಖ್ಯಮಂತ್ರಿ ಪದಕ ವಿಜೇತ ರಾಮನಗರ ಎಎಸ್‌ಪಿ ಬಿ.ವಿ.ಸುರೇಶರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ನಿಟ್ಟೂರು ನಾರಾಯಣಗುರು ಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿ, ರೈತ ಕುಟುಂಬದಲ್ಲಿ ಹುಟ್ಟಿ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿ ಸರ್ಕಾರಿ ಉದ್ಯೋಗ ಪಡೆಯುವ ಮೂಲಕ ರಾಜ್ಯದ ರಾಮನಗರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿಯಾಗಿ ದಕ್ಷತೆಯಿಂದ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರು ಬಿ.ವಿ.ಸುರೇಶ್ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗುವ ಮೂಲಕ ಊರಿನ ಗೌರವಕ್ಕೆ ಪಾತ್ರರಾಗಿದ್ದಾರೆಂದು ಹೇಳಿ, ಇವರಿಗೆ ಇನ್ನೂ ಹೆಚ್ಚಿನ ಗೌರವಗಳು ದೊರೆಯಲಿ ಎಂದು ಶುಭಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಭಾಗವಹಿಸಿ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ದಕ್ಷತೆಯಿಂದ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದು ಬಹಳ ಕಷ್ಟಕರ. ಆದರೂ ಕರ್ತವ್ಯದ ಸಂದರ್ಭದಲ್ಲಿ ಜನರ ನಾಡಿಯನ್ನರಿತು ಅವರಿಗೆ ಸಮರ್ಥವಾಗಿ ನ್ಯಾಯಕೊಡಿಸುವ ಮೂಲಕ ಮುಖ್ಯಮಂತ್ರಿಗಳ ಪದಕಕ್ಕೆ ಪಾತ್ರರಾಗಿರುವ ಸುರೇಶರವರ ಕಾರ್ಯಕ್ಷಮತೆಯನ್ನು ಪ್ರಶಂಸಿಸಿದರು.
ಇದೇ ಸಂದರ್ಭದಲ್ಲಿ ರಾಮನಗರದ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಬಿ.ವಿ.ಸುರೇಶ ದಂಪತಿಗಳನ್ನು ಊರಿನ ನಾಗರೀಕರು ಸನ್ಮಾನಿಸಿ ಗೌರವಿಸಿದರು.
ಅಮೃತ ಗ್ರಾಮ ಪಂಚಾಯಿತ್ ಅಧ್ಯಕ್ಷ ಸಚಿನ್‌ಗೌಡ, ಹೆಚ್.ಎಸ್. ಅನಂತರಾಮಭಟ್, ಟಿ.ಡಿ.ಸೋಮಶೇಖರ್, ಬಷೀರ್ ಅಹಮದ್, ಹೆಚ್.ಎಂ.ವರ್ತೇಶಗೌಡ, ರಾಜು ಶಿವಪುರ, ಟೂಕಪ್ಪ ಇನ್ನಿತರರು, ಊರಿನ ಪ್ರಮುಖರು ಹಾಜರಿದ್ದರು.
SSLC ; ಕುವೆಂಪು ಶಾಲೆಗೆ ಉತ್ತಮ ಫಲಿತಾಂಶ
ಹೊಸನಗರ ; 2024-25ನೇ ಎಸ್ಎಸ್‌ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಪಟ್ಟಣದ ಕುವೆಂಪು ವಿದ್ಯಾ ಸಂಸ್ಥೆಯ ವಿಧ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಪರೀಕ್ಷೆ ಎದುರಿಸಿದ್ದ ಒಟ್ಟು 33 ವಿದ್ಯಾರ್ಥಿಗಳಲ್ಲಿ 7 ಅತ್ಯುನ್ನತ ಶ್ರೇಣಿ, 21 ಪ್ರಥಮ ದರ್ಜೆ ಹಾಗೂ 5 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರಲ್ಲಿ ಯುಕ್ತಾ ಕೆ ಮೂರ್ತಿ 587/625 ಅಂಕ ಪಡೆದರೆ, ಕೆ.ಜಿ.ಅಮೋಘ 584/625 ಅಂಕ ಪಡೆಯುವ ಮೂಲಕ ಶಾಲೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಉತ್ತಮ ಫಲಿತಾಂಶಕ್ಕೆ ಕಾರಣೀಭೂತರಾದ ಶಾಲಾ ಶಿಕ್ಷಕ ವೃಂದ, ಪೋಷಕ ವರ್ಗ ಹಾಗು ಆಡಳಿತ ಮಂಡಳಿ ಸದಸ್ಯರನ್ನು ಶಾಲೆಯ ಮುಖ್ಯಸ್ಥ ಡಾ. ಶ್ರೀನಿವಾಸ್ ಸೊನಲೆ ಅಭಿನಂದಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.