ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ, ಆರೋಗ್ಯ ವರ್ಧಕವೆಂದು ಸಾಬೀತು ; ಸಚಿವ ಆರಗ ಜ್ಞಾನೇಂದ್ರ

0 36

ಬೆಂಗಳೂರು : ಅಡಿಕೆ ಸೇವನೆಯಿಂದ ಹತ್ತು ಹಲವು ಆರೋಗ್ಯ ಲಾಭಗಳಿವೆ ಎಂದು ತಜ್ನರ ಸಂಶೋಧನಾ ವರದಿಯಿಂದ ವೇದ್ಯವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ವಿಧಾನ ಪರಿಷತ್ ನಲ್ಲಿ ತಿಳಿಸಿದರು.

ಸಚಿವರು ವಿಧಾನ ಪರಿಷತ್ತಿನಲ್ಲಿ ಗಮನ ಸೆಳೆವ ಸೂಚನೆಗೆ ಉತ್ತರವಾಗಿ ಮಾತನಾಡುತ್ತ, ಈ ವಿಷಯ ತಿಳಿಸಿದ್ದು ಪ್ರತಿಷ್ಠಿತ ಎಂ ಎಸ್ ರಾಮಯ್ಯ ವಿಶ್ವ ವಿದ್ಯಾಲಯದ ಸಂಸ್ಥೆ, ಈ ಕುರಿತು ಸಂಶೋಧನೆ ನಡೆಸಿದ್ದು ಸದ್ಯದಲ್ಲಿಯೇ ಅಂತರಾಷ್ಟ್ರೀಯ ಮಾನ್ಯತೆ ಪಡೆದ ನಿಯತ ಕಾಲಿಕಾದಲ್ಲಿ ಪ್ರಕಟಣೆ ಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯು ನಡೆಸಿದ ಪ್ರಾಥಮಿಕ ಸಂಶೋಧನೆಗಳ ಪ್ರಕಾರ ಅಡಿಕೆ ತೀವ್ರತರದ ಗಾಯವನ್ನು ಗುಣಪಡಿಸುವ ಮಧುಮೇಹ ಸಮಸ್ಯೆಯ ನಿಯಂತ್ರಣ, ಹೃದಯ ಸಂಬಂಧಿತ ಕಾಯಿಲೆಗಳು, ಉದರದ ಅಲ್ಸರ್ ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಆಶಾದಾಯಿಕ ಫಲಿತಾಂಶಗಳು ಬಂದಿವೆ ಎಂದು ನುಡಿದರು.

ಸುಪ್ರೀಂಕೋರ್ಟ್‌ನಲ್ಲಿ ಅಡಿಕೆ ಸೇವನೆಯಿಂದ ಆಗುವ ಆರೋಗ್ಯ ಲಾಭಗಳ ಕುರಿತು ಕಂಡು ಬಂದಿರುವ ಸಂಶೋಧನಾ ಫಲಿತಾಂಶ ವರದಿಗಳನ್ನು ಸಲ್ಲಿಸಲಾಗುವುದು ಎಂದೂ ಸದನಕ್ಕೆ ತಿಳಿಸಿದರು.

Leave A Reply

Your email address will not be published.

error: Content is protected !!