ಹೊಸನಗರ

ಕೃಷಿ ಹೊಂಡ, ಕೆರೆಗಳ ಅಪಾಯದ ಬಗ್ಗೆ ಜಾಗೃತೆಯಿರಲಿ ; ಸಚಿನ್ ಹೆಗಡೆ

ಹೊಸನಗರ ; ಏಪ್ರಿಲ್, ಮೇ ತಿಂಗಳಲ್ಲಿ ಶೆಕೆ, ಬಿಸಿಲು ಹೆಚ್ಚಾಗಿದ್ದು ಮಕ್ಕಳಿಗೆ ಶಾಲೆಗೆ ರಜೆಯು ಆರಂಭವಾಗಿದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಕೇಳಿಬರುವ ಸುದ್ಧಿ ಎಂದರೆ ಕೃಷಿ ಹೊಂಡಕ್ಕೆ ಈಜಲು ಹೋಗಿ ಮಕ್ಕಳು, ಕೃಷಿ ಕೂಲಿಗಳು ಹಾಗೂ ಜಾನುವಾರುಗಳು ಆಯತಪ್ಪಿ ಬಿದ್ದು ಅಪಘಾತವಾಗಿದೆ ಎಂಬ ಸುದ್ಧಿ ಕೇಳುವ ಮುಂಚೆಯೇ ಜನರು ಜಾಗೃತರಾಗಿರಬೇಕೆಂದು ಹೊಸನಗರದ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೆಶಕ ಸಚಿನ್ ಹೆಗಡೆಯವರು ಜನರನ್ನು ರೈತರನ್ನು ಎಚ್ಚರಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಅವರು ಕೃಷಿ ಇಲಾಖೆ ತಮ್ಮ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ರೈತರು ತಮ್ಮ ಕೃಷಿ ಜಮೀನಿನಲ್ಲಿ ಕೃಷಿ ಹೊಂಡ, ಕೆರೆ, ಕೃಷಿ ಬಾವಿ ಹೊಂದಿರುವ ಎಲ್ಲ ರೈತರು ಸುತ್ತಲೂ ಬಲವಾದ ಬೇಲಿಯನ್ನು ಅಳವಡಿಸಿ. ಸಾಧ್ಯವಾಗದಿದ್ದಲ್ಲಿ ಮುಳ್ಳುಗಂಟಿಗಳನ್ನು ಪೇರೆಸಿಟ್ಟು ಬೇಲಿಯಂತೆ ಅಳವಡಿಸಿ ಬೇಲಿಯ ಬದಲಾಗಿ ಶೇಡ್‌ನೆಟ್ ಅಥವಾ ಹಳೆಯ ಸೀರೆಗಳನ್ನು ಬಳಸಬಹುದು.

ನಿಮ್ಮ ಕೆರೆಯು ಸಾರ್ವಜನಿಕರು ಓಡಾಡುವ ಜಾಗದಲ್ಲಿದ್ದರೆ ಕಡ್ಡಾಯವಾಗಿ ಬೇಲಿ ಮತ್ತು ಚಿಕ್ಕ ಎಚ್ಚರಿಕೆ ಬೋರ್ಡ್ ಅಳವಡಿಸಿ. ಸಾಮಾನ್ಯವಾಗಿ ಎಲ್ಲ ಕೃಷಿ ಹೊಂಡಗಳು ಇಳಿಜಾರಿನಿಂದ ಕೂಡಿದ್ದು ಹೊಂಡಕ್ಕೆ ಇಳಿದ ಯಾರೇ ಆಗಲಿ ಮೇಲೆ ಹತ್ತಿ ಬರಲು ಮೆಟ್ಟಿಲುಗಳಿರುವುದಿಲ್ಲ‌. ಆದ್ದರಿಂದ ಒಂದು ಹಗ್ಗವನ್ನಾಗಲಿ ಅಥವಾ ಹಳೆಯ ಬಿದಿರಿನ ಏಣಿಯನ್ನಾಗಲಿ ಇಳಿಜಾರಿಗೆ ಇಡಿ. ಹಳೆಯ ಟ್ಯೂಬ್‌ಗಳನ್ನು ತೇಲಿ ಬಿಡಬಹುದು ಹಗ್ಗವನ್ನು ಎಕ್ಸ್ ಮಾರ್ಕಿನಲ್ಲಿ ಕೃಷಿ ಹೊಂಡಕ್ಕೆ ಕಟ್ಟಬಹುದು. ಅಪಘಾತ ನಡೆದ ನಂತರ ಮರುಗುವುದಕ್ಕಿಂತ ಮೊದಲೇ ಎಚ್ಚರಿಕೆ ವಹಿಸುವುದು ಉತ್ತಮ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]