HOSANAGARA ; ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಸೂಚನೆ ಮೇರೆಗೆ, ತಾಲೂಕು ಬಿಜೆಪಿ ಮುಖಂಡ ಬೆಳಗೋಡು ಗಣಪತಿ ಅವರನ್ನು ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಸಚಿವರು ಶಿವಮೊಗ್ಗ ಜಿಲ್ಲಾ ದೂರವಾಣಿ ಸಲಹಾ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಬಿಎಸ್ಎನ್ಎಲ್ ಸ್ಥಿರ ದೂರವಾಣಿ, ಮೊಬೈಲ್ ಟವರ್‌ಗಳ ಕಾರ್ಯನಿರ್ವಹಣೆ, ಟವರ್‌ಗಳ ನಿರ್ಮಾಣ ಪ್ರಗತಿ ಕಾರ್ಯ, ನೆಟ್‌ವರ್ಕ್ ಸೇರಿದಂತೆ ದೂರವಾಣಿ ಇಲಾಖೆಗೆ ಸೇರಿದ ವಿವಿಧ ರೀತಿಯ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಸರಿಯಾಗಿ ದೊರೆಯುವಂತೆ ಮಾಡುವುದು ಹಾಗು ಸಲಹಾ ಸಮಿತಿ ಸಭೆಗಳಲ್ಲಿ ಭಾಗವಹಿಸಿ ಸಲಹೆ, ಸಹಕಾರ, ಮಾರ್ಗದರ್ಶನ ನೀಡುವುದು ಸದಸ್ಯರ ಕರ್ತವ್ಯವಾಗಿದೆ.