ಕೇಂದ್ರ ಸರ್ಕಾರವು ನಮ್ಮ ದೇಶದ ಮಹಿಳೆಯರು ಸ್ವಾವಲಂಬಿಯಾಗಿರಲಿ ಅವರಿಗೆ ಯಾವುದೇ ಸಮಸ್ಯೆ ಬರದೇ ಇರಲಿ ಎಂದು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು, ಆ ಮೂಲಕ ಮಹಿಳೆಯರು ಸ್ವಂತವಾಗಿ ಸಂಪಾದನೆ ಮಾಡಲು ಸಹಾಯ ಮಾಡುತ್ತದೆ. ಇದೀಗ ಸರ್ಕಾರವು ಮಹಿಳೆಯರು ಅನುಕೂಲ ಆಗುವ ಹಾಗೆ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದೆ. ಆ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..
ಕೇಂದ್ರ ಸರ್ಕಾರವು ಈಗ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಅರ್ಹತೆ ಇರುವ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಎಲ್ಲಾ ಮಹಿಳೆಯರು ಕೂಡ ಅರ್ಜಿ ಸಲ್ಲಿಸಬಹುದು. ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು, ನೀವು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಈ ಯೋಜನೆಯ ಮೂಲಕ ಉಚಿತ ಹೊಲಿಗೆ ಯಂತ್ರವನ್ನು ಪಡೆದು, ಮಹಿಳೆಯರು ಬಟ್ಟೆ ಹೊಲೆಯುವ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಂಡು, ಸ್ವಯಂ ಉದ್ಯೋಗ ಮಾಡಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು, ಮಹಿಳೆಯರು ಹೊಲಿಗೆಯ ಟ್ರೇನಿಂಗ್ ಪಡೆದಿರುವ ಸರ್ಟಿಫಿಕೇಟ್ ಹೊಂದಿರಬೇಕು. ಇದರ ಜೊತೆಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಇನ್ನು ಕೆಲವು ಪ್ರಮುಖವಾದ ದಾಖಲೆಗಳು ಇರಬೇಕಾಗುತ್ತದೆ.
ಇದೆಲ್ಲವನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಬಹುದು. ವಿಶ್ವಕರ್ಮ ಯೋಜನೆಯ ಮೂಲಕ ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರದ ವಿತರಣೆ ನಡೆಯುತ್ತಿದೆ. ಹಾಗಾಗಿ ನೀವು ಕೂಡ ಅರ್ಹತೆ ಹೊಂದಿದ್ದರೆ ಈಗಲೇ ಅರ್ಜಿ ಸಲ್ಲಿಸಿ, ಹೊಸ ಹೊಲಿಗೆ ಯಂತ್ರವನ್ನು ಪಡೆಯಿರಿ.
Read more
ರೈತರಿಗೆ ಸಿಹಿಸುದ್ದಿ, 14 ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ
Gruha lakshmi:ಈ ರೂಲ್ಸ್ ಪಾಲಿಸಿದರೆ ಮಾತ್ರ ನಿಮ್ಮ ಖಾತೆ ಸೇರಲಿದೆ ಗೃಹಲಕ್ಷ್ಮಿ 11 ನೇ ಕಂತಿನ ಹಣ