ಬೈಕ್ ಅಪಘಾತ, ಸೊನಲೆಯ ಯುವಕ ಸ್ಥಳದಲ್ಲೇ ಸಾವು !

Written by Mahesha Hindlemane

Published on:

HOSANAGARA ; ಸವಾರನ ನಿಯಂತ್ರಣ ತಪ್ಪಿ ಬೈಕಿನಿಂದ ಬಿದ್ದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಸೊನಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳಗಿ ಬಳಿ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಸಂಭವಿಸಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸೊನಲೆಯ ವಾಸಿ ನಾಗರಾಜ್ ಎಂಬುವರ ಪುತ್ರ ಸುಮಂತ್ (30) ಸಾವನ್ನಪ್ಪಿದ ಯುವಕ. ಸೊನಲೆಯಿಂದ ಹೊಸನಗರದ ಕಡೆಗೆ ಬರುತ್ತಿದ್ದ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಧರೆಗೆ ಅಪ್ಪಳಿಸಿ ಈ ಘಟನೆ ನಡೆದಿದೆ.

ಸುಮಂತ್ ನಾಗರಾಜ್ ಅವರ ಏಕಮಾತ್ರ ಪುತ್ರನಾಗಿದ್ದು ಈತ ಅವಿವಾಹಿತನಾಗಿದ್ದ ಎಂದು ತಿಳಿದುಬಂದಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment