ಮೂಡಿಗೆರೆ: ಪೊಲೀಸ್ ಠಾಣೆಯಲ್ಲಿ ಕಳ್ಳತನ ಆರೋಪಿಯ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದ ಮೂಡಿಗೆರೆ ಠಾಣೆಯ ಪೊಲೀಸ್ ಪೇದೆಗಳಿಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ.
ಮೂಡಿಗೆರೆ ಪೊಲೀಸ್ ಠಾಣೆಯ ಪೇದೆಗಳಾದ ವಸಂತ್, ಲೋಹಿತ್ ರನ್ನು ಸಸ್ಪೆಂಡ್ ಮಾಡಲಾಗಿದ್ದು, ಸಬ್ ಇನ್ಸ್‌ಪೆಕ್ಟರ್ ಆದರ್ಶ್ ವಿರುದ್ಧ ಇಲಾಖೆ ತನಿಖೆಗೆ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಆದೇಶಿಸಿದ್ದಾರೆ.
ಕಳ್ಳತನದ ಆರೋಪದ ಮೇಲೆ ದಾರದಹಳ್ಳಿ ನಿವಾಸಿ ಮಂಜು ಎಂಬುವವರ ಮೇಲೆ ಪೊಲೀಸರು ಠಾಣೆಯಲ್ಲಿ ಫೆ.9 ರಂದು ಮನಸ್ಸೋ ಇಚ್ಛೆ ಥಳಿಸಿದ್ದರು. ಈ ಬಗ್ಗೆ ಮಂಜು ಪತ್ನಿ ಯಶೋಧ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಗೆ ದೂರು ನೀಡಿದ್ದರು.
ಗಂಭೀರವಾಗಿ ಹಲ್ಲೆಗೊಳಗಾದ ಮಂಜು ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.