Rain Update | ಹುಲಿಕಲ್‌ನಲ್ಲಿ ಅತ್ಯಧಿಕ 16 ಸೆಂ.ಮೀ. ಮಳೆ ; ಉಳಿದ ಕಡೆ ಎಷ್ಟು ಮಳೆಯಾಗಿದೆ ಗೊತ್ತಾ ?

0 39

ಹೊಸನಗರ : ಕಳೆದ ಎರಡ್ಮೂರು ದಿನಗಳಿಂದ ಮಲೆನಾಡಿನಲ್ಲಿ ಮಳೆ ಅಬ್ಬರ ಜೋರಾಗಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿದೆ. ಗುರುವಾರ ಬೆಳಿಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಹುಲಿಕಲ್ಲಿನಲ್ಲಿ ಅತ್ಯಧಿಕ 161 ಮಿ.ಮೀ. ಮಳೆ ದಾಖಲಾಗಿದೆ.

ಉಳಿದಂತೆ ತಾಲೂಕಿನ ಮಾಸ್ತಿಕಟ್ಟೆಯಲ್ಲಿ 158, ಮಾಣಿಯಲ್ಲಿ 156, ಯಡೂರಿನಲ್ಲಿ 127, ಸಾವೇಹಕ್ಲುವಿನಲ್ಲಿ 120 ಚಕ್ರಾನಗರದಲ್ಲಿ 109, ನಗರದಲ್ಲಿ 62.2, ಹುಂಚದಲ್ಲಿ 43.2 ಮತ್ತು ರಿಪ್ಪನ್‌ಪೇಟೆಯಲ್ಲಿ 28.2 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಇನ್ನೂ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1744.4 ಅಡಿ ತಲುಪಿದೆ. ಜಲಾಶಯಕ್ಕೆ 15466 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯ 1819 ಅಡಿ ಗರಿಷ್ಠ ನೀರಿನ ಮಟ್ಟ ಹೊಂದಿದೆ.

Leave A Reply

Your email address will not be published.

error: Content is protected !!