ಗೇರುಪುರ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಬೇಡ ; ಗ್ರಾಮಸ್ಥರಿಂದ ಮನವಿ

0 77


ಹೊಸನಗರ: ತಾಲ್ಲೂಕಿನ ಕಸಬಾ ಹೋಬಳಿ ಗೇರುಪುರ ಗ್ರಾಮದ ಸರ್ವೆನಂಬರ್ 9ರಲ್ಲಿ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಬಾರದೆಂದು ಗ್ರಾಮಸ್ಥರು ತಹಶೀಲ್ದಾರ್ ವಿ.ಎಸ್ ರಾಜೀವ್‌ರವರಿಗೆ ಮನವಿ ಸಲ್ಲಿಸಿದರು.


ಮನವಿ ಪತ್ರದಲ್ಲಿ ಸ.ನಂ 9ರಲ್ಲಿ ಈಗಾಗಲೇ 2 ಕ್ವಾರೆಗಳಿಂದ ಗ್ರಾಮಸ್ಥರಿಗೆ ತೊಂದರೆ ಉಂಟಾಗುತ್ತಿದ್ದು ಮತ್ತು ಮನೆಗಳಿಗೆ ಹಾನಿಯುಂಟಾಗಿದ್ದು ಕಲ್ಲು ಕ್ವಾರೆಗಳು ನಡೆಯುತ್ತಿರುವ ಪ್ರದೇಶದಿಂದ ಬೇರೆ ಊರುಗಳಿಗೆ ಓಡಾಡುವ ರಸ್ತೆಯಿದ್ದು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ತೊಂದರೆ ಉಂಟಾಗುತ್ತಿದೆ ನಮ್ಮ ಸುತ್ತ-ಮುತ್ತಲಿನ ಪರಿಸರ ನಾಶದಿಂದ ಮಕ್ಕಳಿಗೆ ಕಾಯಿಲೆಗಳು ಬರುತ್ತಿದ್ದು ಕಲ್ಲು ಕ್ವಾರೆಯಲ್ಲಿ ಬ್ಲಾಸ್ಟಿಂಗ್ ನಡೆಸುತ್ತಿರುವುದರಿಂದ ಮನೆಯ ಗೋಡೆಗಳಿಗೂ ಹಾನಿಯಾಗುತ್ತಿದೆ. ನಮ್ಮ ಸುತ್ತಮುತ್ತ ದೂಳಿನ ಮಯವಾಗಿದ್ದು ದೂಳಿನಿಂದ ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ ಬ್ಲಾಸ್ಟ್ ಆದ ಕಲ್ಲುಗಳು ಮನೆಯ ಮೇಲೆ ಬೀಳುತ್ತಿರುವುದರಿಂದ ಮುಂದೆ ತೊಂದರೆಯಾಗುವ ಸಂಭವವಿದ್ದು ತಕ್ಷಣ ಸ್ಥಳ ತನಿಖೆ ನಡೆಸುವುದರ ಜೊತೆಗೆ ಕಲ್ಲು ಕ್ವಾರೆಯನ್ನು ನಿಲ್ಲಿಸಲು ಆದೇಶ ಮಾಡಬೇಕೆಂದು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಗೇರುಪುರ ಪ್ರಶಾಂತ್, ರಾಘವೇಂದ್ರ, ಆನಂದ, ಅಣ್ಣಪ್ಪ, ಕುಮಾರ, ರಾಜು, ಶೇಲಾ, ವೀರೇಂದ್ರ, ಅನಿತಾ, ಮೋಹನ್ ರಾಜ್, ಆಶಾ, ಸುಜಾತ, ಚಂದ್ರ, ರಾಜೇಶ ಇನ್ನೂ ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!