ರಿಪ್ಪನ್‌ಪೇಟೆ ; ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗೆ ನಿರಂತರ ಪರಿಶ್ರಮದ ಜೊತೆಗೆ ಶಿಕ್ಷಕ ಹಾಗೂ ಹಿರಿಯರಲ್ಲಿ ವಿನಯ ಗೌರವಭಾವನೆ ಹೊಂದಿ ವಿದ್ಯೆ ಕಲಿತವರು ಭವಿಷ್ಯದಲ್ಲಿ ಸಾರ್ಥಕ ಜೀವನ ಕಂಡುಕೊಳ್ಳಬಹುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು.
ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ 2024-25 ನೇ ಸಾಲಿನ ಸಾಂಸ್ಕೃತಿ ಕ್ರೀಡಾ ಎನ್.ಎಸ್.ಎಸ್.ಯುವ ರೆಡ್‌ಕ್ರಾಸ್ ರೆಡ್ ರಿಬ್ಬನ್ ರೋರ‍್ಸ್ ಮತ್ತು ರೇಂರ‍್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಆಭಿವೃದ್ದಿ ಶಿಕ್ಷಣದ ಮೂಲಕ ಸಾಧ್ಯ ಭೌತಿಕ ಆಸ್ತಿಗಿಂತ ಬೌದ್ಧಿಕ ಆಸ್ತಿಗೆ ಹೆಚ್ಚು ಬೆಲೆ ಇದೆ. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದ ಅವರು, ಶಿಕ್ಷಣದಿಂದ ಯಾರು ವಂಚಿತರಾಗಬಾರದು. ಕಷ್ಟದಲ್ಲಿದ್ದರೆ ನನ್ನ ಬಳಿ ಸಂಕೋಚವಿಲ್ಲದೆ ನೇರವಾಗಿ ಬಂದು ಭೇಟಿ ಮಾಡಿ ವಿದ್ಯಾಭ್ಯಾಸಕ್ಕೆ ನಾನು ಸದಾ ಸ್ಪಂದಿಸುತ್ತೇನೆಂದು ವಿದ್ಯಾರ್ಥಿಗಳಿಗೆ ತಿಳಿಸಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯ ಪ್ರೋ.ಹೆಚ್.ಎಸ್.ವಿರೂಪಾಕ್ಷಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮಾರೋಪ ಭಾಷಣವನ್ನು ಸಾಗರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಕನ್ನಡ ಉಪನ್ಯಾಸಕ ಡಾ.ಸರ್ಪ್ರಾಜ್ ಚಂದ್ರಗುತ್ತಿ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ, ಸಿಡಿಸಿ ಉಪಾಧ್ಯಕ್ಷ ಹಾಲಸ್ವಾಮಿಗೌಡ ಬೆಳಕೋಡು, ಸಿಡಿಸಿ ಸದಸ್ಯರಾದ ಪಿಯೂಸ್ ರೋಡ್ರಿಗಸ್, ಮಂಜುನಾಥ ಕಾಮತ್, ಹರ್ಷ ಭದ್ರಪ್ಪ, ಗ್ಯಾರಂಟಿ ಸಮಿತಿಯ ತಾಲ್ಲೂಕು ಅಧ್ಯಕ್ಷ ಚಿದಂಬರ್, ಕಾಂಗ್ರೆಸ್ ಮುಖಂಡ ಮಾಸ್ತಿಕಟ್ಟೆ ಸುಬ್ರಮಣ್ಯ, ತಾಲ್ಲೂಕು ಪಂಚಾಯಿತ್ ಕಾರ್ಯಾನಿರ್ವಾಹಣಾಧಿಕಾರಿ ನರೇಂದ್ರ, ಇನ್ನಿತರರು ಹಾಜರಿದ್ದರು.
ವರ್ಷಿತಾ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಡಾ.ಕುಮಾರ್ ಸ್ವಾಗತಿಸಿದರು. ಪ್ರೋ. ಆರ್.ಕೆ.ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.