ಕಾಡಾನೆಗಳ ಹಾವಾಳಿ, ಲಕ್ಷಾಂತರ ರೂ. ಬೆಳೆ ನಷ್ಟ !

Written by malnadtimes.com

Published on:

SHIVAMOGGA ; ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು ಭಾನುವಾರ ತಡರಾತ್ರಿ ಎರಡು ಕಾಡಾನೆಗಳು ದಾಳಿ ನಡೆಸಿ ರೈತರು ಬೆಳೆದ ಬೆಳೆಗಳನ್ನು ಸಂಪೂರ್ಣ ನಾಶ ಮಾಡಿರುವ ಘಟನೆ ಶಿವಮೊಗ್ಗ ನಗರದಿಂದ 9 ಕಿ.ಮೀ. ದೂರದಲ್ಲಿರುವ ಪುರದಾಳು ಗ್ರಾಮದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಪುರದಾಳು ಗ್ರಾಮದ ರಾಜೇಶ್ ಹಾಗೂ ಬೀರಪ್ಪ, ನಾಗರಾಜ್ ಎಂಬುವರ ಜಮೀನಿಗೆ ಎರಡು ಕಾಡಾನೆಗಳು ದಾಳಿ ಮಾಡಿ ಅಡಿಕೆ ಹಾಗೂ ತೆಂಗಿನ ಮರಗಳನ್ನು ಬುಡಮೇಲು ಮಾಡಿದ್ದು ಜೊತೆಗೆ ಜೋಳ ಹಾಗೂ ಕಬ್ಬು ಬೆಳೆಗಳನ್ನು ನಾಶ ಮಾಡಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ‌.

ಆನೆಗಳ ಬಗ್ಗೆ ಮಾಹಿತಿ ನೀಡಿದ್ರೂ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ, ಆನೆ ದಾಳಿಗೆ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

ಕೂಡಿ ಗ್ರಾಮಕ್ಕೂ ಲಗ್ಗೆ ಇಟ್ಟ ಆನೆಗಳು !

ಇನ್ನೂ ಕಳೆದ ರಾತ್ರಿ ಶಿವಮೊಗ್ಗ ತಾಲೂಕಿನ ಕೂಡಿ ಗ್ರಾಮದ ಕಿರುವಾಸೆ ನಾರಾಯಣಪ್ಪ ಜಮೀನಿಗೆ ಸುಮಾರು 2 ರಿಂದ 3 ಕಾಡಾನೆಗಳು ದಾಳಿ ಮಾಡಿ ಜೋಳ ಮತ್ತು ಅಡಿಕೆ ಗಿಡಗಳನ್ನು ತಿಂದು ನಾಶ ಮಾಡಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ‌.

Leave a Comment