ರೈತರಿಗೋಸ್ಕರ ಬರೋಬ್ಬರಿ ಶೇ 90ರಷ್ಟು ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ಸೆಟ್ ವಿತರಣೆ!ಇಂದೇ ಅಪ್ಲೈ ಮಾಡಿ

Written by Koushik G K

Published on:

ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ದೊಡ್ಡ ಸಹಾಯಧನ ನೀಡುತ್ತಿದೆ., ರಾಷ್ಟ್ರೀಯ ತೋಟಗಾರಿಕೆ ಮಿಷನ್ , ಕೃಷಿ ಯಂತ್ರೋಪಕರಣ ಹಾಗೂ ಕೃಷಿ ಭಾಗ್ಯ ಯೋಜನೆಗಳ ಅಡಿಯಲ್ಲಿ ರೈತರಿಗೆ ಶೇ 90ರಷ್ಟು ಸಬ್ಸಿಡಿಯೊಂದಿಗೆ ಡೀಸೆಲ್ ಪಂಪ್ಸೆಟ್ಗಳನ್ನು ನೀಡಲಾಗುತ್ತಿದೆ. ಬೆಳೆಗಳಿಗೆ ಸಮರ್ಪಕ ರೀತಿಯಲ್ಲಿ ನೀರಾವರಿ ಸೌಲಭ್ಯ ಒದಗಿಸಲು ಈ ಯೋಜನೆಯು ಸಹಕಾರಿಯಾಗಲಿದೆ.

WhatsApp Group Join Now
Telegram Group Join Now
Instagram Group Join Now

ಅರ್ಹ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ತೋಟಗಾರಿಕೆ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಪಾಸ್ಪೋರ್ಟ್ ಸೈಜ್ ಫೋಟೋ, ಜಮೀನಿನ ಆರ್ಟಿಸಿ ಜೆರಾಕ್ಸ್ ಪ್ರತಿ, ಹಾಗೂ ನೀರಿನ ಮೂಲದ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.

ಕರ್ನಾಟಕ ಸರ್ಕಾರದ ಈ ಯೋಜನೆಯಿಂದ ರೈತರಿಗೆ ಬಹಳ ಅನುಕೂಲಕರವಾಗಲಿದೆ. ಕೃಷಿ ಹೊಂಡದಿಂದ ನೀರನ್ನು ಸುಲಭವಾಗಿ ಎತ್ತಿ ಬೆಳೆಗಳಿಗೆ ಸರಿಯಾದ ಸಮಯಕ್ಕೆ ನೀರನ್ನು ಒದಗಿಸಲು ಸಹಾಯಕವಾಗಿದೆ. ಈ ಡೀಸೆಲ್ ಪಂಪ್ಸೆಟ್ಗಳು ಕಡಿಮೆ ವೆಚ್ಚದಲ್ಲಿ ರೈತರಿಗೆ ಲಭ್ಯವಾಗುತ್ತಿರುವುದರಿಂದ ಬಹಳ ಅನುಕೂಲಕರವಾಗಿರುವುದರ ಜೊತೆಗೆ ನೀರಿನ ಕೊರತೆಯಿಂದ ಬೆಳೆಗಳು ನಾಶವಾಗುವ ಸಮಸ್ಯೆಯನ್ನು ಈ ಪಂಪ್ಸೆಟ್ಗಳು ಹೋಗಲಾಡಿಸುತ್ತದೆ.

ಸರ್ಕಾರವು ರೈತರಿಗೆ ಶೇ 90 ರಷ್ಟು ಸಹಾಯಧನವನ್ನು ನೀಡುವ ಮೂಲಕ ರೈತರಿಗೆ ಹಣದ ಉಳಿತಾಯವಾಗುವುದಲ್ಲದೇ ರೈತಾಪಿ ಕುಟುಂಬಕ್ಕೆ ಈ ಸಹಾಯಧನವು ವರದಾನವಾಗಿದೆ. ಸರ್ಕಾರವು ಈ ರೀತಿ ರೈತರಿಗೆ ಸಹಾಯವನ್ನು ನೀಡುವ ಯೋಜನೆಗಳನ್ನು ಜಾರಿಗೊಳಿಸುವುದರಿಂದ ಹೆಚ್ಚು ಇಳುವಳಿಯನ್ನು ತೆಗೆಯಲು ಸಹಾಯವಾದಂತೆ ಆಗುತ್ತದೆ.

ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದು ನಿಮ್ಮ ನೆರೆಯ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಕೃಷಿ ಕಚೇರಿಯನ್ನು ಸಂಪರ್ಕಿಸಿ . ಸರಿಯಾದ ದಾಖಲೆಯನ್ನು ನೀಡಿ ಸಬ್ಸಿಡಿಯ ಅನುಕೂಲವನ್ನು ರೈತರು ಪಡೆಯಬಹುದು.

Read More

ಶಿವಮೊಗ್ಗ- ಮೈಸೂರು ಎಕ್ಸ್ಪ್ರೆಸ್ ರೈಲಿನ ಲೇಟೆಸ್ಟ್ ಅಪ್ಡೇಟ್ !

FASTag ವಾರ್ಷಿಕ ಪಾಸ್ : ಏನಿದು? ಪ್ರಸ್ತುತ ಬಳಕೆದಾರರ ಮೇಲೆ ಎಫೆಕ್ಟ್ ಆಗುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಜೂನ್ 30ರಿಂದ ಹಣ ಕಳಿಸುವ ಮೊದಲು ಫೋನ್ ಪೇ, ಗೂಗಲ್ ಪೇ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು!

Author Profile

Koushik G K
ಅವರು MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.

Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.

Leave a Comment