ಭಯ ಹುಟ್ಟಿಸಲು ಕಾರಿನಲ್ಲಿ ಲಾಂಗ್ ಹಿಡಿದು ಓಡಾಟ, ಇಬ್ಬರ ಬಂಧನ !

Written by malnadtimes.com

Published on:

N.R.PURA | ಕಾರಿನಲ್ಲಿ ಲಾಂಗ್ ಹಿಡಿದು ಓಡಾಟ ನಡೆಸಿ ಅದರ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಆರೋಪದ ಮೇಲೆ ಯುವಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಮಗನೊಂದಿಗೆ ಚಿಕ್ಕಮ್ಮನ ಸರಸದಾಟ, ಅಡ್ಡ ಬರ್ತಿದ್ದ ಗಂಡನಿಗೆ ವಿಷ ಹಾಕಿ ಕೊಂದು ಕಥೆ ಕಟ್ಟಿದ್ಲು !

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಪಟ್ಟಣದ 6ನೇ ವಾರ್ಡ್ ಬೆಟ್ಟಗೆರೆ ನಿವಾಸಿಗಳಾದ ಮೆಕಾನಿಕ್ ಸೈಯದ್ ಸಲ್ಮಾನ್ (22) ಮತ್ತು ಕಾರ್ಪೆಂಟರ್ ಮಹಮ್ಮದ್ ಸಾದಿಕ್ (25) ಬಂಧಿತ ಆರೋಪಿಗಳು.

ಇಬ್ಬರು ವ್ಯಕ್ತಿಗಳು ಕಪ್ಪು ಕಾರಿನಲ್ಲಿ ಲಾಂಗ್ ಇರಿಸಿಕೊಂಡು ಹೆದರಿಕೆ ಹುಟ್ಟಿಸುವ ರೀತಿಯಲ್ಲಿ ಶೆಟ್ಟಿಕೊಪ್ಪ ಗ್ರಾಮದ ಕಡೆಯಿಂದ ಬರುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಗುರುದತ್ ಕಾಮತ್ ನೇತೃತ್ವದಲ್ಲಿ ಪೊಲೀಸರು ಕಾರ್ಯಚರಣೆ ಮಾಡಿದ್ದರು.

ತಾಲ್ಲೂಕಿನ ಸೌತಿಕೆರೆ ಗ್ರಾಮದ ಬಳಿ ಕಾರನ್ನು ತಡೆದು ಪರಿಶೀಲಿಸಿದಾಗ ಲಾಂಗ್ ಕಂಡುಬಂದಿತ್ತು. ‘ನಮ್ಮನ್ನು ನೋಡಿ ಜನರು ಹೆದರಿಕೊಳ್ಳಬೇಕು ಎಂಬ ಉದ್ದೇಶದಿಂದ ಲಾಂಗ್ ತೋರಿಸುತ್ತ ಓಡಾಡಿದ್ದೆವು’ ಎಂದು ಆರೋಪಿಗಳು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆಯುಧ ಮತ್ತು ಕಾರನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಯುವರಾಜ್, ದೇವರಾಜ್, ಚೈತ್ರಾ ಪಾಲ್ಗೊಂಡಿದ್ದರು.

ಅಪ್ರಾಪ್ತನಿಂದ ಬೈಕ್ ಚಾಲನೆ, ತಂದೆಗೆ 25 ಸಾವಿರ ರೂ. ದಂಡ !

Leave a Comment