RIPPONPETE ; ಕ್ಷಮಾ-ಅಹಂ ಎರಡು ಚಿಕ್ಕಪದಗಳು ಅದರೆ ಕ್ಷಮಾ ಅನುವುದು ಸಂಬAಧಗಳನ್ನು ಉಳಿಸಿದರೆ ಅಹಂ ಎನ್ನುವುದು ಎಷ್ಟೋ ಸಂಬಂಧಗಳನ್ನು ಹಾಳು ಮಾಡುತ್ತದೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಗವಟೂರು ಹೊಳೆಸಿದ್ದೇಶ್ವರ ದೇವಸ್ಥಾನ ಸಮಿತಿಯವರು ಎಳ್ಳಾಮಾವಾಸ್ಯೆ ಅಂಗವಾಗಿ ಏರ್ಪಡಿಸಲಾದ ಹೊಳೆಸಿದ್ದೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ರುದ್ರಾಭೀಷೇಕ ಧರ್ಮಸಭೆಯ ದಿವ್ಯಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿ, ಶ್ರೀ ಜಗದ್ಗುರು ರೇಣುಕಾ ಭಗವತ್ಪಾದರು ಸಿದ್ದಾಂತ ಶಿಖಾಮಣಿಯಲ್ಲಿ ಧರ್ಮಸೂತ್ರಗಳನ್ನು ಭೋದಿಸುವಾಗ ಕ್ಷಮಾ ಗುಣ ಇದ್ದವರ ಬದುಕು ನಿಜವಾಗಿ ಶುದ್ದವಾಗಿರುತ್ತದೆಂದು ಹೇಳಿದರು.
ಹೊಳೆಸಿದ್ದೇಶ್ವರ ದೇವಸ್ಥಾನ ಸೇವಾ ಸಮಿತಿಯ ಆದ್ಯಕ್ಷ ಉಲ್ಲಾಸ ತೆಂಕೂಲ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯ್ತಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ, ವೆಂಕಟಚಲ, ಅರುಣ್ ಕುಮಾರ್, ಹಿರಿಯರಾದ ಜಿ.ಎಂ.ದುಂಡರಾಜಗೌಡ, ಕೃಷ್ಣಯ್ಯ ಶೆಟ್ಟಿ, ಜನಾರ್ದನಾ, ಕುಬೇರಪ್ಪ, ನಾಗೇಂದ್ರ, ವಸಂತ ಇನ್ನಿತರರು ಹಾಜರಿದ್ದರು.
ಚಂದ್ರಕಲಾ ಪ್ರಾರ್ಥಿಸಿದರು. ನಾಗೇಂದ್ರ ಸ್ವಾಗತಿಸಿ, ನಿರೂಪಿಸಿದರು.