FASTag Annual Pass:ಈ ನಿರ್ದೇಶಿತ ನೀತಿಯನುಸಾರ, ಮಾಲೀಕರು ಕೇವಲ ಒಂದು ಬಾರಿ ವಾರ್ಷಿಕ ರೂ. 3,000 ಪಾವತಿಸುವ ಮೂಲಕ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು, ಎಕ್ಸ್‌ಪ್ರೆಸ್ ವೇ ಗಳು ಮತ್ತು ರಾಜ್ಯ ಎಕ್ಸ್‌ಪ್ರೆಸ್ ವೇಗಳಲ್ಲಿ ಅನಿಯಮಿತ ದೂರದ ವರೆಗೂ ಪ್ರಯಾಣಿಸಬಹುದಾಗಿದೆ. ಈ ನೀತಿ ಜಾರಿಗೆ ಬಂದ ಬಳಿಕ, ದೇಶದಾದ್ಯಂತ ಪ್ರಯಾಣಕ್ಕಾಗಿ FASTag ರೀಚಾರ್ಜ್ ಮಾಡುವ ಅವಶ್ಯಕತೆ ಇರುವುದಿಲ್ಲ.
ದೂರವನ್ನು ಆಧರಿಸಿದ ದರದ ವಿಧಾನ:
ಈ ನೀತಿಯಲ್ಲಿ ಪ್ರಯಾಣಿಸಿದಷ್ಟು ಪಾವತಿ (pay – as – you – go – modal) ಮಾದರಿಯನ್ನು ಪ್ರಸ್ತಾಪಿಸಲಾಗಿದ್ದು, 100 ಕಿಮೀಗೆ ₹50 ದರವನ್ನು ನಿಗದಿಪಡಿಸಲಾಗಿದೆ. ಇದು ಆಗಾಗ ಪ್ರಯಾಣಿಸದೇ ಇರುವವರಿಗೆ ಹೆಚ್ಚು ಉಪಯುಕ್ತವಾಗಿದೆ.
ಪ್ರಸ್ತುತ FASTag ಇರುವ ಬಳಕೆದಾರರ ಬಗ್ಗೆ ಏನು?
ವಾಹನದ ಮಾಲೀಕರು ಯಾವುದೇ ಹೆಚ್ಚುವರಿ ದಾಖಲೆಗಳು ಅಥವಾ ಖಾತೆ ಬದಲಾವಣೆಗಳ ಅಗತ್ಯವಿಲ್ಲದೇ, FASTag ಬಳಕೆದಾರರು ತಮ್ಮ ಈಗಿನ ಖಾತೆಗಳಿಂದಲೇ ಹೊಸ ನೀತಿಗೆ ಬದಲಾಯಿಸಬಹುದಾಗಿದೆ. ಜೊತೆಗೆ ಈ ಹಿಂದಿನ 15 ವರ್ಷಗಳ ಅವಧಿಗೆ ₹30,000 ರ ಒಂದು ಬಾರಿ ಪಾವತಿಸುವ ಲೈಫ್ ಟೈಮ್ FASTag ನೀತಿಯನ್ನು ರದ್ದು ಮಾಡಲಾಗಿದೆ.
ಟೋಲ್ ಬೂತ್‌ಗಳಲ್ಲಿ ಅಡ್ಡಿ ತಡೆಗಳು ಇಲ್ಲ :
ಪ್ರಸ್ತಾಪಿತ ನೀತಿಯಂತೆ, ಟೋಲ್ ಬೂತ್‌ಗಳಲ್ಲಿ ಯಾವುದೇ ರೀತಿಯ ಭೌತಿಕ ಅಡ್ಡಿ ತಡೆಗಳು ಇರದು. ಇತ್ತೀಚಿನ ಸೆನ್ಸರ್ ಆಧಾರಿತ ವ್ಯವಸ್ಥೆಗಳನ್ನು ಕೂಡಾ ಹಂತಹಂತವಾಗಿ ತೆರೆವು ಮಾಡಲಾಗುತ್ತದೆ. ಈ ಬದಲಾವಣೆಯಿಂದ ಪ್ರಯಾಣವು ಮತ್ತಷ್ಟು ಸುಲಭ ಮತ್ತು ವೇಗವಾಗುವ ನಿರೀಕ್ಷೆಗಳಿವೆ. ಜೊತೆಗೆ, ಅಡೆ ತಡೆಯಿಲ್ಲದ ಟೋಲ್ ಬೂತ್ ಗಳಿಂದಾಗಿ ವಾಹನ ದಟ್ಟಣೆ ಕಡಿಮೆಯಾಗುತ್ತದೆ ಹಾಗೂ ಇದರಿಂದ ಇಂಧನ ಬಳಕೆ ಸಹಾ ಕಡಿಮೆಯಾಗುತ್ತದೆ ಎನ್ನಲಾಗಿದೆ.
ಟೋಲ್ ಆದಾಯ ಏನಾಗಲಿದೆ ?
ಈ ನೀತಿಯು ಜಾರಿಗೆ ಬಂದಲ್ಲಿ ಹೆದ್ದಾರಿ ಗುತ್ತಿಗೆದಾರರ ಟೋಲ್ ಆದಾಯದ ಮೇಲೆ ಇದು ಪರಿಣಾಮವನ್ನು ಬೀರುತ್ತದೆ ಎನ್ನುವ ನಿರೀಕ್ಷೆ ಇದೆ. ಇದರ ಪರಿಣಾಮವಾಗಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಡಿಜಿಟಲ್ ಪ್ರಯಾಣ ದತ್ತಾಂಶವನ್ನು ಆಧರಿಸಿ ಪರಿಹಾರ ಯೋಜನೆಯನ್ನು ರೂಪಿಸುತ್ತದೆ. ಹಲವು ನೂತನ ಕ್ರಮಗಳನ್ನು ಪರಿಚಯಿಸುವ ಮೂಲಕ ಟೋಲ್ ವಂಚನೆಯನ್ನು ತಡೆಯಲು ಬ್ಯಾಂಕ್ ಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗುವುದು.
ಗಮನಿಸಬೇಕಾದ ವಿಚಾರ ಏನೆಂದರೆ ಈ ಹೊಸ ಟೋಲ್ ಸಂಗ್ರಹ ನೀತಿಯ ಬಗ್ಗೆ ಸರ್ಕಾರ ಇನ್ನೂ ಕೂಡಾ ಯಾವುದೇ ಅಧಿಕೃತ ದೃಢೀಕರಣವನ್ನು ನೀಡಿಲ್ಲ.
Read More
ಹೊಸನಗರ : ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ನವಮಿ ಸೇರ್ಪಡೆ
ಜೂನ್ 30ರಿಂದ ಹಣ ಕಳಿಸುವ ಮೊದಲು ಫೋನ್ ಪೇ, ಗೂಗಲ್ ಪೇ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು!
ಹೊಸನಗರ ; ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 18 ಸೆಂ.ಮೀ. ಮಳೆ
Author Profile
-
ಅವರು MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.
Latest entries
AgricultureMay 28, 2025ರೈತರಿಗೆ ಮಿನಿ ಟ್ರ್ಯಾಕ್ಟರ್, ಪಾಲಿಹೌಸ್, ಹನಿ ನೀರಾವರಿ ಸಹಾಯಧನಕ್ಕೆ ಅರ್ಜಿ ಆಹ್ವಾನ!
AgricultureMay 28, 2025ರೈತರಿಗೋಸ್ಕರ ಬರೋಬ್ಬರಿ ಶೇ 90ರಷ್ಟು ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ಸೆಟ್ ವಿತರಣೆ!ಇಂದೇ ಅಪ್ಲೈ ಮಾಡಿ
NewsMay 28, 2025ಶಿವಮೊಗ್ಗ- ಮೈಸೂರು ಎಕ್ಸ್‌ಪ್ರೆಸ್ ರೈಲಿನ ಲೇಟೆಸ್ಟ್ ಅಪ್ಡೇಟ್ !
Shivamogga NewsMay 27, 2025ವಿಐಎಸ್ಎಲ್ ಕಾರ್ಖಾನೆಗೆ ಕಾಯಕಲ್ಪ; ಕೈಗಾರಿಕಾ ಸಚಿವ ಕುಮಾರಸ್ವಾಮಿ ಹೇಳಿಕೆ ಬಿವೈಅರ್ ಮೆಚ್ಚುಗೆ