ಕಡಸೂರು ಗ್ರಾಮದ ಅರಣ್ಯ ಒತ್ತುವರಿ ತೆರವು !

Written by Mahesha Hindlemane

Published on:

HOSANAGARA | 2021-22ರ ಅರಣ್ಯ ಪ್ರದೇಶ ಒತ್ತುವರಿ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಗುರುವಾರ ಇಲಾಖೆಯ ಮೇಲಾಧಿಕಾರಿಗಳ ಸೂಚನೆ ಮೇರೆಗೆ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ಇಲಾಖಾ ಸಿಬ್ಬಂದಿಗಳು ತಾಲೂಕಿನ ಹುಂಚ ಹೋಬಳಿ ಕಡಸೂರು ಗ್ರಾಮದ ಸ.ನಂ.72ರ ಪರಿಭಾವಿತ ಅರಣ್ಯ ಪ್ರದೇಶದಕ್ಕೆ ತೆರಳಿ, ಸ್ಥಳದಲ್ಲಿ ಇಂಗು ಗುಂಡಿ ನಿರ್ಮಿಸಿ, ಕಾಡುಜಾತಿಯ ಗಿಡಗಳನ್ನು ನೆಟ್ಟು, ಸುಮಾರು ಒಂದು ಎಕರೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ ಇಲಾಖೆಯ ವಶಕ್ಕೆ ಪಡೆದಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ತೆರವು ಕಾರ್ಯವು ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹೊಸನಗರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅವರ ಮಾರ್ಗದರ್ಶನದಲ್ಲಿ ನಡೆದಿದೆ.

Leave a Comment