ಕರ್ನಾಟಕ ರಾಜ್ಯ ಉಗ್ರಣಾ ನಿಗಮದ ಮಾಜಿ ಅಧ್ಯಕ್ಷ ಹೆಚ್.ಟಿ. ಬಳಿಗಾರ ನಿಧನ !

Written by malnadtimes.com

Published on:

SHIKARIPURA ; ತಾಲೂಕಿನ ಜನಪ್ರಿಯ ರಾಜಕಾರಣಿ ನಿವೃತ್ತ ಕೆಎಎಸ್ ಅಧಿಕಾರಿ, ಕರ್ನಾಟಕ ರಾಜ್ಯ ಉಗ್ರಣಾ ನಿಗಮದ ಮಾಜಿ ಅಧ್ಯಕ್ಷ ಹೆಚ್. ಟಿ ಬಳಿಗಾರ (62) ಗುರುವಾರ ರಾತ್ರಿ ಹೃದಯಘಾತದಿಂದ ಬೆಂಗಳೂರಿನಲ್ಲಿ ನಿಧನ ಹೊಂದಿದರು.

WhatsApp Group Join Now
Telegram Group Join Now
Instagram Group Join Now

ಬಂಗಾರಪ್ಪನವರ ಶಿಷ್ಯರಾಗಿದ್ದ ಇವರು ಎಲ್ಲಾ ಪಕ್ಷದವರ ಜೊತೆಗೆ ಸ್ನೇಹಜೀವಿಯಾಗಿದ್ದರು. ಎಲ್ಲಾ ಪಕ್ಷದವರ ಜೊತೆ ಜಾತ್ಯಾತೀತವಾಗಿ ಅಪಾರ ಸ್ನೇಹ ಬಳಗ ಹೊಂದಿದ್ದ ಇವರು ನಂತರ ಜೆ.ಡಿ.ಎಸ್ ಪಕ್ಷದಲ್ಲಿ ಗುರುತಿಸಿಕೊಂಡು ಶಿಕಾರಿಪುರದಲ್ಲಿ ಮಾಜಿ ಸಿ.ಎಂ. ಯಡಿಯೂರಪ್ಪನವರ ವಿರುದ್ಧ ಎರಡು ಬಾರಿ ಸ್ಪರ್ಧೆ ಮಾಡಿ ಸೋತಿದ್ದರು‌. ಶಿಕಾರಿಪುರ ತಾಲೂಕಿನ ಸಮಗ್ರ ಏತ ನೀರಾವರಿಗೆ ಶ್ರಮವಹಿಸಿದ್ದ ಇವರು ನಂತರ ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಮೃತರಿಗೆ ಇಬ್ಬರು ಪುತ್ರಿಯರು, ಇಬ್ಬರು ಮೊಮ್ಮಕ್ಕಳಿದ್ದು ತಾಲೂಕಿನ ಅವರ ಅಸಂಖ್ಯಾತ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಶಿಕಾರಿಪುರ ಬಳಿಯ ಮುಗಳಗೆರೆಯ ಅವರ ತೋಟದಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Comment