ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನ ; ಚಂದ್ರಮೌಳಿ ಸಂತಾಪ

Written by malnadtimes.com

Published on:

HOSANAGARA ; ಕರ್ನಾಟಕದ ದಕ್ಷ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದ ಎಸ್.ಎಂ. ಕೃಷ್ಣ ಅನಾರೋಗ್ಯದಿಂದ ನಿಧನರಾಗಿದ್ದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಸಂತಾಪ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಶಾಲೆ ಮಕ್ಕಳಿಗೆ ಅಕ್ಷರ ದಾಸೋಹ ಕಾರ್ಯಕ್ರಮವನ್ನು ಅಂದೇ ಜಾರಿಗೆ ತಂದು ಎಲ್ಲ ಶಾಲೆ ಮಕ್ಕಳು ಹಸಿವಿನಿಂದ ಇರಬಾರದು ಎಂದು ಬಿಸಿಯೊಟ ಜಾರಿಗೆ ತಂದವರು. ಡಾ|| ರಾಜ್‌ಕುಮಾರ್‌ರನ್ನು ವೀರಪ್ಪನ್ ಅಪಹರಿಸಿದ್ದಾಗ ಜನರು ದುಃಖದಲ್ಲಿರುವಾಗ ರಾಜ್ಯದ ಜನತೆಗೆ ಧೈರ್ಯ ತುಂಬಿ ಡಾ|| ರಾಜ್‌ಕುಮಾರ್‌ರವರನ್ನು ಕಷ್ಟದಿಂದ ಪಾರು ಮಾಡಿದವರು.

ಇವರು ಮುಖ್ಯಮಂತ್ರಿಯಾದ ಸಮಯದಲ್ಲಿ ಕರ್ನಾಟಕದ ಉತ್ತಮ ಆಳ್ವಿಕೆ ನಡೆಸಿ ಯಾವುದೇ ಪಕ್ಷ ಭೇದವಿಲ್ಲದೆ ಜನ ಸೇವೆ ಮಾಡಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದವರಾಗಿದ್ದು ಇವರ ನಿಧನದಿಂದ ಇಡೀ ರಾಜ್ಯ ಜನತೆ ದುಃಖಭರಿತರಾಗಿದ್ದಾರೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Comment