ಹೊಸನಗರ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ನಡೆದ ಸ್ನೇಹ ಸಮ್ಮಿಲನ ಕಾರ್ಯಕ್ರಮ

Written by Mahesha Hindlemane

Published on:

ಹೊಸನಗರ ; ಎಲ್ಲೋ ಹುಟ್ಟುತ್ತೇವೆ ಎಲ್ಲೋ ಬೆಳೆಯುತ್ತೇವೆ ಎಲ್ಲೋ ಓದುತ್ತೇವೆ ಎಲ್ಲೋ ನೌಕರಿಯೂ ಇತರೆ ಕೆಲಸಗಳಲ್ಲಿ ತೊಡಗುತ್ತೇವೆ ಓದಿದ ಶಾಲೆಯ ನೆನಪು ಓದಿದ ಜೊತೆಗಾರರನ್ನು ಒಂದುಗೂಡಿಸಿ ಸಂಭ್ರಮಿಸುವುದೇ ಸ್ನೇಹ ಸಮ್ಮಿಲನವಾಗುವುದರ ಜೊತೆಗೆ ಆ ದಿನದ ಸಂತೋಷಕ್ಕೆ ಪರಿವೇ ಇರುವುದಿಲ್ಲ ಎಂದು ಸ್ನೇಹ ಸಮ್ಮಿಲನ ರೂವಾರಿ ಎಸ್ ನಿರಂಜನ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಸರ್ಕಾರಿ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜ್‌ನ ಆವರಣದಲ್ಲಿ 1985ರಿಂದ 1988ರ ಪ್ರಥಮ ವರ್ಷದ ಬ್ಯಾಚ್ನ ಕಲಾ ವಿಭಾಗ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಈ ಕಾರ್ಯಕ್ರಮವನ್ನು ಮಾಜಿ ಶಾಸಕ ಬಿ.ಸ್ವಾಮಿರಾವ್‌ ಉದ್ಘಾಟಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುವುದರಿಂದ ಸ್ನೇಹ ಬಾಂಧವ್ಯ ವೃದ್ಧಿಯಾಗುತ್ತದೆಯೆಂದರು.

ಈ ಕಾರ್ಯಕ್ರಮದಲ್ಲಿ ಕೊಡಚಾದ್ರಿ ಕಾಲೇಜಿನ ಪ್ರಾಂಶುಪಾಲರಾದ ಕೆ.ಉಮೇಶ್, ಗಣೇಶ್, ನಿವೃತ್ತ ಪ್ರಾಂಶುಪಾಲ ಮಾರ್ಷಲ್ ಶರಾಂ, ಉಪನ್ಯಾಸಕರಾದ ಬಸವರಾಜ್, ಶ್ರೀಪತಿ ಹಳಗುಂದ, ಗ್ರಂಥಪಾಲಕ ಡಾ. ಲೋಕೇಶ್, ಹಿರಿಯ ವಿದ್ಯಾರ್ಥಿಗಳಾದ ಕೆ. ಇಲಿಯಾಸ್, ನಿರಂಜನ್, ಕೃಷ್ಣಮೂರ್ತಿ, ವಾಸಂತಿ, ಲೋಕೇಶ್, ಶಂಕರನಾರಾಯಣ, ಬಾಲಚಂದ್ರ, ವಾಸುದೇವ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment