ತೀರ್ಥಹಳ್ಳಿ : ದೇವಾಲಯದಿಂದ ಚಿನ್ನಾಭರಣ ಕಳ್ಳತನ

Written by Koushik G K

Published on:

ತೀರ್ಥಹಳ್ಳಿ: ದೇವರ ಮೂರ್ತಿಗಳಿಗೆ ಹಾಕಿದ್ದ ಚಿನ್ನದ ಸರ  ಮತ್ತು ಚಿನ್ನದ ಗುಂಡುಗಳನ್ನು ಕಳ್ಳತನ ಮಾಡಿದ ಘಟನೆ  ತಾಲೂಕಿನ  ಗರಗ ಗ್ರಾಮದ  ವೀರಭದ್ರೇಶ್ವರ ಭದ್ರಕಾಳಿ ದೇಗುಲದಲ್ಲಿ ಸಂಭವಿಸಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸುಮಾರು ೩೦ ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿವೆ ಎಂದು ದೇವಾಲಯದ ಸಮಿತಿ ದೂರಿನಲ್ಲಿ ಆರೋಪಿಸಿದೆ.

ದೇಗುಲದ ಜೀರ್ಣೋದ್ಧಾರ ನಡೆಯುತ್ತಿದೆ. ಹಾಗಾಗಿ ದೇವರ ಮೂರ್ತಿಗಳನ್ನು ಪಕ್ಕದಲ್ಲಿರುವ ಬಾಲ ಮಂದಿರದಲ್ಲಿ ಇರಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಈಚೆಗೆ ಬಾಲ ಮಂದಿರದ ಬಾಗಿಲಿನ ಬೀಗ ಮುರಿದು ದೇವರ ಆಭರಣ ಕಳ್ಳತನ ಮಾಡಲಾಗಿದೆ. ಬೆಳಗ್ಗೆ ಪೂಜೆಗೆ ಅರ್ಚಕರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment