SAGARA ; ಬಂಧನದಲ್ಲಿರಿಸಿದ್ದ ಗ್ರೇ ಲಂಗೂರ್ ಅನ್ನು ರಕ್ಷಿಸಿ ಓರ್ವನನ್ನು ಬಂಧಿಸಿದ ಘಟನೆ ವರದಿಯಾಗಿದೆ.
ಪೊಲೀಸ್ ಅರಣ್ಯ ಸಂಚಾರಿ ದಳ ಸಾಗರ ಇವರು ಗಡಿಕಟ್ಟೆಯಲ್ಲಿ ಅಕ್ರಮವಾಗಿ ಕಾಡಿನಿಂದ ಸೆರೆ ಹಿಡಿದು ಬಂಧನದಲ್ಲಿ ಇರಿಸಿದ್ದ ಗ್ರೇ ಲಂಗೂರ್ (Semnopythecus Entellus) ಶೆಡ್ಯೂಲ್ ll ಸಸ್ತನಿಯನ್ನು ಆರೋಪಿಯ ಬಂಧನದಿಂದ ರಕ್ಷಿಸಿ, ವನ್ಯಜೀವಿ ಪ್ರಕರಣ ದಾಖಲಿಸಿ ಓರ್ವ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ದಾಳಿಯಲ್ಲಿ ಪಿಎಸ್ಐ ವಿನಾಯಕ್ ಕೆ . ಹಾಗೂ ಸಿಬ್ಬಂದಿಗಳಾದ ಗಣೇಶ್, ವಿಶ್ವನಾಥ್, ಚಂದ್ರಕಾಂತ್, ಆಂಜನೇಯ ಪಾಟೀಲ್, ಮಹೇಶ್, ದಿನೇಶ್, ಪ್ರಮೋದಕುಮಾರಿ ಪಾಲ್ಗೊಂಡಿದ್ದರು.