ಹೊಸನಗರ ; ಪಟ್ಟಣದ ಗುರೂಜಿ ಇಂಟರ್ ನ್ಯಾಶನಲ್ ರೆಸಿಡೆನ್ಸಿಯಲ್ ಶಾಲೆ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಗಳಿಸಿದೆ.
ಒಟ್ಟು 34 ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆ ಎದುರಿಸಿದ್ದು 14 ಅತ್ಯುನ್ನತ, 18 ಪ್ರಥಮ ಹಾಗೂ ಇಬ್ಬರು ದ್ವಿತೀಯ ಶ್ರೇಣಿ ಪಡೆದು ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿ ಅಚಿಂತ್ಯ ಭಟ್ ಶೇ.97.12 (607/625) ಶಾಲೆಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ.
ಅಂತೆಯೇ, ವಿದ್ಯಾರ್ಥಿನಿಯರಲ್ಲಿ ಶ್ರೇಯ ಯು. 613, ಕೀರ್ತನ ಹಾಗೂ ಅಪೂರ್ವ ತಲಾ 606 ಗಳಿಸಿ ಶಾಲೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.
ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದ ಅಭಿಷೇಕ್ ಎಸ್ ಕಶ್ಯಪ್
ಹೊಸನಗರ ; ಗುಬ್ಬಿಗಾ ವಾಸಿಯಾದ ಅಭಿಷೇಕ್ ಕಶ್ಯಪ್‌ರವರು ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 621ಅಂಕ ಪಡೆಯುವುದರೊಂದಿಗೆ ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದು ಹೊಸನಗರಕ್ಕೆ ಕೀರ್ತಿ ತಂದಿದ್ದಾರೆ.

ಇವರು ಗುಬ್ಬಿಗಾ ಅನಂತರಾವ್‌ರವರ ಮೊಮ್ಮಗ ಹಾಗೂ ಗುಬ್ಬಿಗಾ ಸುನೀಲ್‌ರವರ ಪುತ್ರರಾಗಿದ್ದಾರೆ.