ಹೊಸನಗರ ; ಜ. 20ರಿಂದ 28ರವರೆಗೆ ನಡೆಯಲಿರುವ ಹೊಸನಗರ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದಾಗಿರುವ ಮಾರಿಕಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷರಾಗಿ ಹೆಚ್.ಎಲ್ ದತ್ತಾತ್ರೇಯ ಆಯ್ಕೆಯಾಗಿದ್ದಾರೆ.
ಇಲ್ಲಿನ ದ್ಯಾವರ್ಸದಲ್ಲಿರುವ ಮಾರಿಯಮ್ಮನವರ ತಾಯಿ ಮನೆ ಎಂದೇ ಕರೆಯಲ್ಪಡುವ ದುರ್ಗಾಂಬಾ ದೇವಸ್ಥಾನದ ಆವರಣದಲ್ಲಿ ಎರಡು ದೇವಸ್ಥಾನ ಸಮಿತಿಯ ಸಭೆಯನ್ನು ಏರ್ಪಡಿಸಲಾಗಿದ್ದು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಗಿದೆ.
ಈ ಹಿಂದೆ ಬಹಳಷ್ಟು ವರ್ಷಗಳ ಕಾಲ ಮಾರಿಕಾಂಬಾ ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎಲ್ ಲಕ್ಷ್ಮಿನಾರಾಯಣರಾವ್ ಸೇವೆ ಸಲ್ಲಿಸುತ್ತಿದ್ದು ಇತ್ತಿಚೇಗೆ ಅವರು ನಿಧನರಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನವನ್ನು ಅವರ ಪುತ್ರ ದತ್ತಾತ್ರೇಯರಿಗೆ ವಹಿಸಲು ಸಮಿತಿ ತೀರ್ಮಾನಿಸಿದ್ದು ಅದರಂತೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ದುರ್ಗಾಂಬಾ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಹೆಚ್.ಎನ್ ಶ್ರೀಪತಿರಾವ್ ದೇವಸ್ಥಾನ ಸಮಿತಿಯ ಹಿರಿಯರಾದ ಶ್ರೀನಿವಾಸ್ ಕಾಮತ್, ಪರಮೇಶ್ವರರಾವ್, ಪ್ರಭಾಕರ್, ಗಣಪತಿ-ಪಾರ್ವತಿ ಮಹೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಸದಾಶಿವ ಶ್ರೇಷ್ಟಿ, ಪಿ. ಮನೋಹರ, ದ್ಯಾವರ್ಸ ಸುಬ್ರಹ್ಮಣ್ಯ, ಎನ್ ದತ್ತಾತ್ರೇಯ ಉಡುಪ, ದೇವಸ್ಥಾನ ಸಮಿತಿಯ ವ್ಯವಸ್ಥಾಪಕರಾದ ನಾಗರಾಜ್, ವಿಜಯಕುಮಾರ್, ಕೆ.ಎಸ್. ಗುರುರಾಜ್, ಹೆಚ್.ಎಸ್ ಗಿರೀಶ್, ಗೋಪಾಲ್, ವಾದಿರಾಜ್ ಭಟ್, ಟಿ.ಆರ್. ಸುನೀಲ್ ಕುಮಾರ್, ನಿತ್ಯಾನಂದ ಹೆಚ್.ಎಂ. ಗುತ್ತಿಗೆದಾರರಾದ ಮಹಾಬಲ, ಶ್ರೀಧರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





