ಸಿಗಂದೂರು ಸೇತುವೆ ನಿರ್ಮಾಣ ಕಾರ್ಯಕ್ಕೆ ಶ್ರಮಿಸಿದ ಸಂಸದರನ್ನು ಪ್ರಶಂಸಿಸಿದ ಹರತಾಳು ಹಾಲಪ್ಪ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇದೇ 14 ರಂದು ಲೋಕಾರ್ಪಣೆಗೊಳ್ಳುತ್ತಿರುವ ಅಂಬಾರಗೊಡ್ಲು-ಕಳಸವಳ್ಳಿ-ಸಿಗಂದೂರು ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹೆಸರಿಡುವುದು ಸಮಯೋಚಿತ ನಿರ್ಧಾರದೊಂದಿಗೆ ಸಾರ್ವಜನಿಕರ ಒಕ್ಕೊರಲಿನ ಅಭಿಪ್ರಾಯವಾಗಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಸಮ್ಮತಿ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now

ಇಂದು ಸಿಗಂದೂರು ನೂತನ ಸೇತುವ ಉದ್ಘಾಟನೆಯ ಮುನ್ನ ಕಾಮಗಾರಿಯ ವೀಕ್ಷಣೆ ನಡೆಸಿದ ಸಂಸದ ಬಿ.ವೈ.ರಾಘವೇಂದ್ರರವರ ಜೊತೆಯಲ್ಲಿದ್ದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 6 ದಶಕಗಳ ಕನಸು ಈಡೇರಿದಂತಾಗಿದೆ ಸರ್ಕಾರ ಯಾವುದೇ ಇರಲಿ ಅಭಿವೃದ್ದಿಯಲ್ಲಿ ಎಲ್ಲರು ಕೈ ಜೋಡಿಸಿದಾಗ ಇನ್ನೂ ಹೆಚ್ಚಿನ ಅನುದಾನವನ್ನು ತರುವ ಕಾರ್ಯದಲ್ಲಿ ಸಂಸದರು ಮುಂಚೂಣಿಯಲ್ಲಿದ್ದಾರೆಂದು ಸಂಸದರನ್ನು ಅಭಿನಂದಿಸಿ ಶರಾವತಿ ಮುಳುಗಡೆಯಿಂದಾಗಿ ರೈತರ ಸಂಕಷ್ಟದ ಸ್ಥಿತಿಯಲ್ಲಿ ಬದುಕು ಕಟ್ಟಿಕೊಳ್ಳಲು 6 ದಶಕಗಳ ಕಾಲ ಬೇಕಾಯಿತು. ಅಲ್ಲದೆ ಬಿ.ಎಸ್.ಯಡಿಯೂರಪ್ಪನವರ ಸತತ ಪರಿಶ್ರಮದಿಂದಾಗಿ ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಇವರನ್ನು ಅಭಿನಂದಿಸಿ ಈ ಸುತುವೆ ಯಡಿಯೂರಪ್ಪ ಸೇತುವೆ ಎಂದು ಹೇಳಿದರು.

ಸಾಗರ-ಹೊಸನಗರ ಎರಡು ತಾಲ್ಲೂಕುಗಳು ಒಳಗೊಂಡಂತೆ ಸಂಪರ್ಕ ಇಲ್ಲದೆ ಈ ಭಾಗದ ರೈತಾಪಿ ವರ್ಗದವರಿಗೆ ದ್ವೀಪದಂತಾಗಿದ್ದ ಸಿಗಂದೂರು – ಕೊಲ್ಲೂರು ಇನ್ನಿತರ ಪ್ರೇಕ್ಷಣಿಯ ಸ್ಥಳಗಳಿಗೆ ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದು ತಪ್ಪಿದಂತಾಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್, ಹಕ್ರೆ ಮಲ್ಲಿಕಾರ್ಜುನ, ಟಿ.ಡಿ.ಮಘೇರಾಜ್, ಗ್ರಾಮ ಪಂಚಾಯ್ತಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ, ಶಾಂತಕುಮಾರ್ ಜಂಬಳ್ಳಿ, ರಾಜು ಹುಗುಡಿ, ಚಂದ್ರು ಕೋಟೆಗದ್ದೆ, ರಿಪ್ಪನ್‌ಪೇಟೆ ರಮೇಶ, ಸುನೀಲ್, ಆದರ್ಶ, ಇನ್ನಿತರರು ಹಾಜರಿದ್ದರು.

Leave a Comment