HOSANAGARA | ತಾಲೂಕಿನ ಬಿದನೂರುನಗರ ಹೋಬಳಿಯಾದ್ಯಂತ ವರುಣಾರ್ಭಟ ಜೋರಾಗಿದ್ದು ರಾತ್ರಿಯಿಡಿ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಮಂಗಳವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಬಿದನೂರುನಗರದಲ್ಲಿ ರಾಜ್ಯದಲ್ಲೇ ಅತ್ಯಧಿಕ 316 ಮಿ.ಮೀ. ಮಳೆ ದಾಖಲಾಗಿದೆ.
ಮತ್ತೆಲ್ಲೆಲ್ಲಿ ಎಷ್ಟಾಗಿದೆ ಮಳೆ ?
- ಮಾಸ್ತಿಕಟ್ಟೆ : 240 mm
- ಚಕ್ರಾನಗರ : 220 mm
- ಯಡೂರು : 217 mm
- ಹುಲಿಕಲ್ : 210 mm
- ಮಾಣಿ : 185 mm
- ಸಾವೇಹಕ್ಲು : 167 mm
- ಕಾರ್ಗಲ್ (ಸಾಗರ) : 67.4 mm
- ಹೊಸನಗರ : 39 mm
ಲಿಂಗನಮಕ್ಕಿ ಜಲಾಶಯ :
1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇಂದು ಬೆಳಗ್ಗೆ 8:00 ಗಂಟೆಗೆ 1810.50 ಅಡಿ ತಲುಪಿದ್ದು ಜಲಾಶಯಕ್ಕೆ 50710 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ 1786.30 ಅಡಿ ದಾಖಲಾಗಿತ್ತು.