SHIVAMOGGA ಮಲೆನಾಡಿನಾದ್ಯಂತ ಭಾರಿ ಮಳೆ, ಜನಜೀವನ ಅಸ್ತವ್ಯಸ್ತ !

Written by malnadtimes.com

Published on:

SHIVAMOGGA | ಹೊಸನಗರ, ತೀರ್ಥಹಳ್ಳಿ, ಸಾಗರ, ಸೊರಬ ತಾಲ್ಲೂಕಿನಾದ್ಯಂತ ಹಲವೆಡೆ ಇಂದು ಬೆಳಗ್ಗೆಯಿಂದ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ಥವಾಗಿದೆ‌.

WhatsApp Group Join Now
Telegram Group Join Now
Instagram Group Join Now

ಸೊರಬ ತಾಲೂಕಿನಾದ್ಯಂತ ಕಳೆದೊಂದು ವಾರದಿಂದ ಜಿಟಿ ಜಿಟಿ ಸುರಿಯುತ್ತಿದ್ದ ಮಳೆಯಿಂದಾಗಿ ರೈತರು ಕೃಷಿ ಚಟುವಟಿಕೆಗೆ ಅಣಿಯಾಗಿದ್ದರು. ತಾಲೂಕಿನ ಬಹುತೇಕ ಕಡೆ ಭೂಮಿಯನ್ನು ಹದಗೊಳಿಸಿ ಜೋಳದ ಬಿತ್ತನೆ ಕಾರ್ಯ ಚುರುಕಾಗಿದೆ. ಇದೀಗ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ರೈತರಲ್ಲಿ ಸಂತೋಷಕ್ಕೆ ಕಾರಣವಾಗಿದೆ.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ರಸ್ತೆಯ ಮೇಲೆ ನೀರು ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ಹಳೇ ಬಿಇಒ ಕಚೇರಿ ಮುಂಭಾಗದಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ ಮಳೆ ನೀರಿನೊಂದಿಗೆ ಕೊಳಚೆ ನೀರು ಸಹ ರಸ್ತೆಯ ಮೇಲೆಯೇ ಹರಿಯಿತು.

ಇನ್ನು ದಂಡಾವತಿ ಬ್ಲಾಕ್ ಸಮೀಪದಲ್ಲಿರುವ ನದಿಕಟ್ಟೆ ಆಂಜನೇಯ ದೇವಸ್ಥಾನ ಮುಂಭಾಗದಲ್ಲಿ ಮಳೆ ನೀರು ರಸ್ತೆಯಲ್ಲಿ ನಿಂತ ಪರಿಣಾಮ ವಾಹನಗಳ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿತು. ಜೊತೆಗೆ ಗ್ರಾಮೀಣ ಪ್ರದೇಶದಿಂದ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಪರದಾಡಿದರು.

ಬೀದಿ ಬದಿಯ ವ್ಯಾಪಾರಿಗಳು ವ್ಯಾಪಾರಕ್ಕೆಂದು ತಂದಿದ್ದ ವಸ್ತುಗಳನ್ನು ಮಳೆಯಿಂದ ರಕ್ಷಿಸಲು ಟಾರ್ಪಲ್ ಗಳಿಂದ ಮುಚ್ಚಿದ್ದ ದೃಶ್ಯ ಕಂಡು ಬಂದಿತು. ಉಳಿದಂತೆ ಮಳೆಯಿಂದ ಯಾವುದೇ ಅನಾಹುತವಾದ ಬಗ್ಗೆ ವರದಿಯಾಗಿಲ್ಲ.

Read More

ಹೊಸನಗರ ತಾಲೂಕಿನ ಎಲ್ಲ ಶಾಲೆಯ ಮುಖ್ಯ ಶಿಕ್ಷಕರಿಗೆ ಬಿಇಒ ಸೂಚನೆ ನೀಡಿದ್ದಾರೆ ಏನದು ?

LPG Gas Price |  ಇಂದಿನಿಂದ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ !ಇಲ್ಲಿದೆ ಮಾಹಿತಿ

ಓಮ್ನಿ ಮತ್ತು ಬೈಕ್ ನಡುವೆ ಅಪಘಾತ, ಸವಾರ ಸ್ಥಳದಲ್ಲೇ ಸಾವು !

Leave a Comment