ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರೆದ ಭಾರಿ ವರ್ಷಧಾರೆ, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?

Written by malnadtimes.com

Published on:

SHIVAMOGGA/CHIKKAMAGALURU |  ಮಲೆನಾಡು (Malenadu) ಜಿಲ್ಲೆಗಳಾದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಂಗಳವಾರ ತಡರಾತ್ರಿಯಿಂದ ಭಾರಿ ಮಳೆ (Heavy Rain) ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

WhatsApp Group Join Now
Telegram Group Join Now
Instagram Group Join Now

Read More:LED Bulb | ಎಲ್‌ಇಡಿ ಹೆಡ್‌ಲೈಟ್ ಅಳವಡಿಸಿಕೊಂಡ ವಾಹನಗಳ ಮಾಲೀಕರೇ ದಂಡ ಕಟ್ಟಲು ಸಜ್ಜಾಗಿ !

ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಸಮೀಪದ ನೆಲ್ಲಿಬೀಡು ಗ್ರಾಮದ ಬಳಿ ಕಳಸ-ಮಂಗಳೂರು ರಾಜ್ಯ ಹೆದ್ದಾರಿಯಲ್ಲಿ ಮರ ಅಡ್ಡಲಾಗಿ ಬಿದ್ದಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳೀಯರು ಕಾರ್ಯಾಚರಣೆ ನಡೆಸಿ ಮರ ತೆರವು ಮಾಡಿದ್ದಾರೆ.

ಇನ್ನು ಮೂಡಿಗೆರೆ ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿದಿದ್ದು, ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್, ಬಣಕಲ್, ಕೊಟ್ಟಿಗೆಹಾರ, ಜಾವಳಿ, ಮಲೆಮನೆ, ರಾಣಿಜರಿ, ಸುಂಕಸಾಲೆ, ದೇವರಮನೆ ಸುತ್ತಮುತ್ತ ಬಿರುಸಿನ ಮಳೆಯಾಗಿದೆ.

ಕಳೆದೊಂದು ವಾರದಿಂದ ಬಿಡುವು ನೀಡಿದ್ದ ವರುಣದೇವ, ತಡರಾತ್ರಿಯಿಂದ ಮತ್ತೆ ಅಬ್ಬರಿಸುತ್ತಿದ್ದಾನೆ. ಭಾರಿ ಗಾಳಿ-ಮಳೆಗೆ ಚಾರ್ಮಾಡಿಯಲ್ಲಿ ವಾಹನ ಸವಾರರು ಪರದಾಡುತ್ತಿದ್ದಾರೆ.

ಇತ್ತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನಾದ್ಯಂತ ಬಿರುಸಿನ ಮಳೆಯಾಗುತ್ತಿದೆ. ಆಗುಂಬೆ ಘಾಟ್ ನಲ್ಲಿ ಮಂಜು ಮುಸುಕಿದ ವಾತಾವರಣ ಉಂಟಾಗಿದೆ.

ಇನ್ನೂ ಬುಧವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿದ ಮಳೆ ವಿವರ ಈ ಕೆಳಗಿನಂತಿದೆ.

ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :

  • ಹೊಸೂರು-ಸಂಪೆಕಟ್ಟೆ (ಹೊಸನಗರ) : 78.5
  • ಮೇಲಿನಬೆಸಿಗೆ (ಹೊಸನಗರ) : 76
  • ಮುಂಬಾರು (ಹೊಸನಗರ) : 67
  • ಬಿದರಗೋಡು (ತೀರ್ಥಹಳ್ಳಿ) : 63
  • ನೊಣಬೂರು (ತೀರ್ಥಹಳ್ಳಿ) : 61
  • ಕೋಡೂರು (ಹೊಸನಗರ) : 60.5
  • ಅರೆಹಳ್ಳಿ (ತೀರ್ಥಹಳ್ಳಿ) : 54.5
  • ಸೊನಲೆ (ಹೊಸನಗರ) : 50
  • ಚಿಕ್ಕಜೇನಿ (ಹೊಸನಗರ) : 45.5
  • ಖಂಡಿಕಾ (ಸಾಗರ) : 43.5

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ. ಗಳಲ್ಲಿ) :

  • ಬಣಕಲ್ (ಮೂಡಿಗೆರೆ) : 64.5
  • ಬೇಗಾರು (ಶೃಂಗೇರಿ) : 57.5
  • ಕಮ್ಮರಡಿ (ಕೊಪ್ಪ) : 50.5
  • ಕೂತಗೋಡು (ಶೃಂಗೇರಿ) : 44
  • ಹೊರನಾಡು (ಕಳಸ) : 41
  • ವಿದ್ಯಾರಣ್ಯಪುರ (ಶೃಂಗೇರಿ) : 40.5
  • ಹಿರೇಕೊಡಿಗೆ (ಕೊಪ್ಪ) : 39.5
  • ಸೀತೂರು (ಎನ್.ಆರ್.ಪುರ) : 35
  • ಹರಿಹರಪುರ (ಕೊಪ್ಪ) : 32
  • ನಿಲುವಾಗಿಲು (ಕೊಪ್ಪ) : 31.5

Read More:LED Bulb | ಎಲ್‌ಇಡಿ ಹೆಡ್‌ಲೈಟ್ ಅಳವಡಿಸಿಕೊಂಡ ವಾಹನಗಳ ಮಾಲೀಕರೇ ದಂಡ ಕಟ್ಟಲು ಸಜ್ಜಾಗಿ !

Leave a Comment