HOSANAGARA | ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ (Hosanagara) ತಾಲೂಕಿನ ಮೇಲಿನಸಂಪಳ್ಳಿಯ ಗೊರಗದ್ದೆ ನಿವಾಸಿ ಪರಮೇಶ್ ಎಂಬುವವರು ಎಂದಿನಂತೆ ತೋಟದ ಕೆಲಸ ನಿರ್ವಹಿಸುತ್ತಿರುವಾಗ ರಭಸದ ಗಾಳಿ, ಮಳೆಗೆ ಮರದ ಕೊಂಬೆಯೊಂದು ದಿಢೀರನೆ ಬೆನ್ನ ಮೇಲೆ ಬಿದ್ದ ಪರಿಣಾಮ ಸ್ಟೈನಲ್ ಕಾರ್ಡ್ (ಬೆನ್ನುಮೂಳೆ) ಮುರಿದುರುತ್ತದೆ.
ಮನೆಯ ಸಂಪೂರ್ಣ ಜವಾಬ್ದಾರಿ ಇವರೇ ಹೊತ್ತಿತ್ತು ಇಳಿವಯಸ್ಸಿನ ಅಜ್ಜಿ, ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳಿದ್ದಾರೆ.

ಗಾಯಗೊಂಡ ಪರಮೇಶನನ್ನು ಉಡುಪಿಯ ಮಣಿಪಾಲನಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದು ಶಸ್ತ್ರಚಿಕಿತ್ಸೆಗೆ ಸುಮಾರು 16-20 ಲಕ್ಷ ರೂ. ವೆಚ್ಚವಾಗಲಿದೆ. ಇದನ್ನು ಭರಿಸಲು ಅವರಿಗೆ ಸಾಧ್ಯವಾಗದ ಕಾರಣ, ಇರುವ ತುಂಡು ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡು ಬದುಕುತ್ತಿರುವ ಇವರಿಗೆ ತಾವುಗಳು ಧನ ಸಹಾಯ ಮಾಡಲು ಮನವಿ ಮಾಡಲಾಗಿದೆ.

ಧನ ಸಹಾಯ ಮಾಡಲು ಇವರ ಪತ್ನಿ ಕಮಲ ಎಂಬುವವರ UPI ID : 115169757004609@cnrb ಇದಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇವರ ಸಂಪರ್ಕ ಸಂಖ್ಯೆ 7259131448 ಕ್ಕೆ ಕರೆ ಮಾಡಬಹುದು.
Read more:-ರಾಜ್ಯಕ್ಕೆ ಇಂದು ಎಂಟ್ರಿಯಾಗಲಿದೆ ಮುಂಗಾರು, ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.