ಹೊಸನಗರ

ಹೊಸನಗರ ತಾಲ್ಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನ | ಹೊರ ರಾಜ್ಯ ವಲಸೆಗಾರರಿಂದ ಕನ್ನಡ ಭಾಷೆ ನಶಿಸುತ್ತಿದೆ ; ಪ್ರೋ. ಕೃಷ್ಣೇಗೌಡ

ಹೊಸನಗರ ; ನಮ್ಮಲ್ಲಿರುವ ಕನ್ನಡಿಗರು ಕೆಲಸ ಮಾಡದೇ ಸೋಮಾರಿಗಳಾಗಿರುವುದರಿಂದ ಹೊರ ರಾಜ್ಯದವರು ಕೆಲಸಕ್ಕಾಗಿ ಕರ್ನಾಟಕ ರಾಜ್ಯವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ ಇದರಿಂದ ಪಟ್ಟಣ ಜಿಲ್ಲೆ ರಾಜ್ಯಗಳಲ್ಲಿ ಹೊರ ರಾಜ್ಯದವರಿಂದ ಕನ್ನಡ ಭಾಷೆ ಸಂಸ್ಕೃತಿ ನಶಿಸುತ್ತಿದೆ ಎಂದು ಪ್ರೊಪೆಸರ್ ಹಾಗೂ ಸಾಹಿತಿ ಕೃಷ್ಣೇಗೌಡ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಸೀತಾರಾಮಚಂದ್ರ ಸಭಾಭವನದಲ್ಲಿ ಹೊಸನಗರ ತಾಲ್ಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೊಸನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ನಮ್ಮಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಯುವಕರು ಉದ್ಯೋಗವಿಲ್ಲ ಎಂದು ಸರ್ಕಾರಕ್ಕೆ ಯುವನಿಧಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಆದರೇ ಕೆಲವು ಕಂಪನಿಗಳಲ್ಲಿ ಉದ್ಯೋಗಕ್ಕೆ ಬೇಕಾಗಿದ್ದಾರೆ ಎಂದು ಆಹ್ವಾನ ಅರ್ಜಿ ಕರೆದರೂ ಹೋಗುವವರ ಸಂಖ್ಯೆ ವಿರಳವಾಗಿದೆ. ದುಡ್ಡು ಬೇಕು ಆದರೇ ಕೆಲಸ ಮಾಡೊಲ್ಲ ಎಂಬ ಮನಸ್ಥಿತಿ ಇರುವುದರಿಂದಲ್ಲೇ ಹೊರ ರಾಜ್ಯದವರು ಉದ್ಯೋಗಕ್ಕಾಗಿ ಇಲ್ಲಿಗೆ ಬಂದು ಕರ್ನಾಟಕದಲ್ಲಿಯೇ ಬೀಡು ಬಿಟ್ಟಿದ್ದಾರೆ ಎಂದರು.

ಕನ್ನಡ ಸಾಹಿತ್ಯ 12ನೇ ಶತಮಾನದಲ್ಲಿಯೇ ಇದ್ದರೂ ಕೂಡ ಅಲ್ಪ ಕಾಲದಲ್ಲಿ ಇಂಗ್ಲೀಷ್ ವ್ಯಾಮೋಹದಿಂದ ಕನ್ನಡ ಭಾಷೆ ಮರೆಯುವಂತೆ ಮಾಡಿದೆ ಮುಂದಿನ ಪೀಳಿಗೆಗೆ ಕನ್ನಡ ಭಾಷೆ ಕನ್ನಡ ಸಾಹಿತ್ಯ ಉಳಿಯಬೇಕಾದರೇ ಇಂದಿನಿಂದಲ್ಲೇ ಯುವ ಪೀಳಿಗೆಗೆ ಕನ್ನಡ ಪುಸ್ತಕ ಓದುವುದು ಬರೆಯುವುದು ಸಾಹಿತ್ಯದ ಬಗ್ಗೆ ಪೋಷಕರು ಓದಿಸಿದರೇ ಮಾತ್ರ ಕನ್ನಡ ಭಾಷೆ ಕನ್ನಡ ಸಾಹಿತ್ಯ ಉಳಿಯಲು ಸಾಧ್ಯ ಎಂದರು.

ಹೊಸನಗರ ತಾಲ್ಲೂಕು ಮಟ್ಟದ 11ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎಂ.ಎಂ. ಪ್ರಭಾಕರ ಕಾರಂತ ಮಾತನಾಡಿ, ಸ್ಥಾನಮಾನಗಳು ಯಾವ ವ್ಯಕ್ತಿಯ ಕೊಡುಗೆ ಅಥವಾ ದಯೆಯೆಂದು ತಿಳಿದುಕೊಳ್ಳಬಾರದು. ಮಾಡುವ ಕೆಲಸಗಳಿಂದ ಅವರಿಗೆ ಸ್ಥಾನಮಾನಗಳು ಲಭಿಸುತ್ತದೆ ಎಂದರು.

ಸರ್ಕಾರದಿಂದ ನೀಡುವ ಹಣ ಅಲ್ಪ ಪ್ರಮಾಣ ; ಬೇಳೂರು ಗೋಪಾಲಕೃಷ್ಣ

11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಗರ-ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, ಕನ್ನಡ ಸಾಹಿತ್ಯ ರಾಜ್ಯ ಸಮ್ಮೇಳನಗಳಿಗೆ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಹಣ ನೀಡುತ್ತಿದ್ದು ಜಿಲ್ಲೆ ತಾಲ್ಲೂಕು ಸಮ್ಮೇಳನಗಳಿಗೆ ಅಲ್ಪ ಪ್ರಮಾಣದ ಹಣ ನೀಡುತ್ತಿದೆ ಇದರ ಬಗ್ಗೆ ನಾನು ಈಗಾಗಲೇ ಸರ್ಕಾರದೊಂದಿಗೆ ಮಾತನಾಡಿದ್ದೇನೆ. ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಜಿಲ್ಲೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚಿನ ರೀತಿಯಲ್ಲಿ ಹಣ ಕೊಡಿಸಲು ಪ್ರಯತ್ನಿಸುತ್ತೇನೆಂದು, ಇದರ ಜೊತೆಗೆ ಯುವ ಪೀಳಿಗೆ ಕಥೆ ಕಾದಂಬರಿ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸಾಹಿತ್ಯ ಚುಟುಕುಗಳನ್ನು ಬರೆಯುವುದಾದರೆ ಪುಸ್ತಕ ಬಿಡುಗಡೆಯ ಖರ್ಚುಗಳನ್ನು ತಮ್ಮ ಶಾಸಕರ ನಿಧಿಯಿಂದ ನೀಡುವುದಾಗಿ ಹೇಳಿ, ಕನ್ನಡ ಸಾಹಿತ್ಯ ಕನ್ನಡ ಭಾಷೆ ಉಳಿಸುವ ಪ್ರಯತ್ನ ಎಲ್ಲರೂ ಮಾಡೋಣ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಬೆಳಿಗ್ಗೆ ಸಮ್ಮೇಳನಾಧ್ಯಕ್ಷ ಎಂ.ಎಂ. ಪ್ರಭಾಕರ್ ಕಾರಂತ್‌ರವರನ್ನು ಮರೆವಣಿಗೆಯ ಮೂಲಕ ಸರ್ವಾಧ್ಯಕ್ಷರೊಂದಿಗೆ ಸಾಹಿತ್ಯದ ನಡೆ ಸಮ್ಮೇಳನದ ಕಡೆ ಎಂಬ ವೇದ್ಯವಾಕ್ಯದೊಂದಿಗೆ ಕರೆತರಲಾಯಿತು.

ಧ್ವಜಾರೋಹಣ ನಿರ್ವಹಣೆ ಹೊಸನಗರ ತಹಸೀಲ್ದಾರ್ ಭರತ್‌ರಾಜ್‌ ನೇರವೇರಿಸಿದರು.
ನಾಡಧ್ವಜವನ್ನು ಜಿಲ್ಲಾಧ್ಯಕ್ಷರಾದ ಡಿ. ಮಂಜುನಾಥ್‌ ನೇರವೇರಿಸಿದರು. ಪರಿಷತ್ ಧ್ವಜವನ್ನು ತಾಲ್ಲೂಕು ಅಧ್ಯಕ್ಷ ಗಣೇಶ್‌ಮೂರ್ತಿ ನೇರವೇರಿಸಿದರು.

ಕಾರ್ಯಕ್ರಮ ಉದ್ಘಾಟನೆ ಸಂದರ್ಭದಲ್ಲಿ ತಹಸೀಲ್ದಾರ್ ಭರತ್‌ರಾಜ್, ನಿಕಟ ಸಮ್ಮೇಳನಾಧ್ಯಕ್ಷರ ನುಡಿ ನುಡಿದ ಡಿ.ಎಸ್ ಶ್ರೀಧರ್, ಪ್ರಾಸ್ತವಿಕವಾಗಿ ಮಾತನಾಡಿದ ನಾಗರಕೊಡಿಗೆ ಗಣೇಶ್‌ಮೂರ್ತಿ, ತ.ಮ. ನರಸಿಂಹ, ಜನಪದ ಪರಿಷತ್ ಅಧ್ಯಕ್ಷರಾದ ಎಂ.ಎಂ. ಪರಮೇಶ್, ಸಾಹಿತ್ಯ ಸಾಂಸ್ಕೃತೀಕ ವೇದಿಕೆಯ ಅಧ್ಯಕ್ಷ ನಗರ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ವಿಜೇಂದ್ರ ಶೇಟ್, ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಕೆ.ಜಿ. ನಾಗೇಶ್, ನಿಕಟ ಪೂರ್ವ ಅಧ್ಯಕ್ಷ ಮಾರ್ಷಲ್ ಶರಾಂ, ಎನ್ ಶ್ರೀಧರ ಉಡುಪ, ಡಾ|| ಶಾಂತರಾಮ್ ಪ್ರಭು, ಅಂಬ್ರಯ್ಯಮಠ, ಚಂದ್ರಶೇಖರ ಶೇಟ್, ಕೆ. ಇಲಿಯಾಸ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು..

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]