Hosanagara Rain | ಮಳೆ(ಲೆ)ನಾಡಿನ ತವರೂರು, ಲಿಂಗನಮಕ್ಕಿ (Linganamakki) ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ (Hosanagara) ತಾಲೂಕಿನಾದ್ಯಂತ ಮಳೆಯಾರ್ಭಟ ಜೋರಾಗಿದ್ದು ಸೋಮವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಹುಲಿಕಲ್ ನಲ್ಲಿ ಅತ್ಯಧಿಕ 96 ಮಿ.ಮೀ. ಮಳೆ ಸುರಿದಿದೆ.
ಉಳಿದಂತೆ ಮಾಣಿಯಲ್ಲಿ 90, ಮಾಸ್ತಿಕಟ್ಟೆಯಲ್ಲಿ 25, ಯಡೂರಿನಲ್ಲಿ 66, ಸೊನಲೆಯಲ್ಲಿ 24 ಮತ್ತು ಹೊಸನಗರದಲ್ಲಿ 17.4 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಇನ್ನೂ 1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇಂದು ಬೆಳಿಗ್ಗೆ 8 ಗಂಟೆಗೆ 1745 ಅಡಿ ತಲುಪಿದ್ದು ಕಳೆದ ಬಾರಿ ಇದೇ ಅವರಿಗೆ 1744.60 ಅಡಿ ದಾಖಲಾಗಿತ್ತು. ಜಲಾಶಯಕ್ಕೆ 5285 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ತಾಲೂಕುವಾರು ಮಳೆ ವಿವರ :
- ಶಿವಮೊಗ್ಗ : 2.80 ಮಿ.ಮೀ.
- ಭದ್ರಾವತಿ : 5 ಮಿ.ಮೀ.
- ತೀರ್ಥಹಳ್ಳಿ : 27.80 ಮಿ.ಮೀ.
- ಸಾಗರ : 18.40 ಮಿ.ಮೀ.
- ಶಿಕಾರಿಪುರ : 2.80 ಮಿ.ಮೀ.
- ಸೊರಬ : 5.10 ಮಿ.ಮೀ.
- ಹೊಸನಗರ : 17.80 ಮಿ.ಮೀ.