HOSANAGARA ; ಈ ಬಾರಿಯ ನಾಡಹಬ್ಬ ದಸರಾ ತಾಲೂಕಿನಲ್ಲಿ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಳ್ಳಲು ಸಾರ್ವಜನಿಕರ ಸಹಕಾರವೇ ಕಾರಣ ಎಂದು ತಹಶೀಲ್ದಾರ್ ರಶ್ಮಿ ಹಾಲೇಶ್ ತಿಳಿಸಿದರು.
ಗುರುವಾರ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ದಸರಾ ಆಚರಣಾ ಸಮಿತಿ ಜಮಾ ಖರ್ಚು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ದಸರಾ ಆಚರಣೆ ಕುರಿತಾದ ಜಮಾ ಖರ್ಚು ಮಂಡಿಸಿದರು.
ಈ ಬಾರಿ ಒಟ್ಟಾರೆ 5,45,550 ರೂ. ಸಂಗ್ರಹವಾಗಿದ್ದು, 4,94,500 ರೂ. ವ್ಯಯವಾಗಿದೆ. ಚಂಡೆ, ರೋಡ್ ಆಕೇಷ್ಟ್ರಾ ಗೊಂಬೆ ಕುಣಿತ, ನಾದಸ್ವರ, ಡೊಳ್ಳು ಕುಣಿತ, ಹುಲಿ ಕುಣಿತ, ಭಜನೆ, ಪೇಟ, ದಸರಾ ಕ್ರೀಡಾಕೂಟದ ವಿಜೇತರಿಗೆ ಬಹುಮಾನ, ಪಟಾಕಿ, ಧ್ವನಿವರ್ಧಕ, ಹೂವು-ಹಾರ, ದೇವಾಲಯಕ್ಕೆ ಸುಣ್ಣ-ಬಣ್ಣ ಸೇರಿದಂತೆ ಇತರೆ ಕಾರ್ಯಗಳಿಗೆ ಹಣ ವ್ಯಯವಾಗಿ, 51,500 ರೂ. ಹೆಚ್ಚುವರಿ ಖರ್ಚಾಗಿದೆ ಎಂದು ಸಭೆಗೆ ತಿಳಿಸಿದರು. ಈ ಕುರಿತು ಸಾರ್ವಜನಿಕರಿಗೆ ಯಾವುದೇ ಮಾಹಿತಿ ಬೇಕಾದಲ್ಲಿ ತಹಶೀಲ್ದಾರ್ ಕಚೇರಿ ನಾಮಫಲಕ ವೀಕ್ಷಿಸುವಂತೆ ತಿಳಿಸಿದರು.
ದಸರಾ ಯಶಸ್ವಿಗೆ ಕಾರಣೀಭೂತರಾದ ಸಾರ್ವಜನಿಕರಿಗೆ 2024-25ನೇ ಸಾಲಿನ ದಸರಾ ಆಚರಣೆ ಸಮಿತಿ ಅಧ್ಯಕ್ಷ ದುಮ್ಮ ವಿನಯ್ ಗೌಡ ಇದೇ ಸಂದರ್ಭದಲ್ಲಿ ಕೃತಜ್ಞತೆ ಸಮರ್ಪಿಸಿದರು.
ಈ ವೇಳೆ ನಾಡಹಬ್ಬ ಸಮಿತಿ ಸದಸ್ಯರಾದ ಶ್ರೀನಿವಾಸ ಕಾಮತ್, ಶ್ರೀಧರ ಉಡುಪ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜುನಾಥ್, ಪ್ರಮಯಖರಾದ ಜಯನಗರ ಗೋಪಿನಾಥ್, ಕಚ್ಚಿಗೆಬೈಲು ಸಾಧಿಕ್, ನಾಸೀರ್, ಉಬೇದ್ ಸಾಬ್, ಬ್ರಹ್ಮೇಶ್ವರ ಸುಧೀರ್, ಖಜಾಂಚಿ ವರ್ಣೇಕರ್, ಕಸಬಾ ಶಿರಸ್ತೇದಾರ್ ಕಟ್ಟೆ ಮಂಜುನಾಥ್ ಉಪಸ್ಥಿತರಿದ್ದರು.