ಹೊಸನಗರ :ಹುಲಿಕಲ್ ಘಾಟ್‌ನಲ್ಲಿ ಲಾರಿಯೊಂದು ತಿರುವಿನಲ್ಲಿ ಕೆಟ್ಟು ನಿಂತ ಪರಿಣಾಮವಾಗಿ, ನೂರಾರು ವಾಹನಗಳು ಕಿಲೋಮೀಟರ್‌ಗಟ್ಟಲೆ ರಸ್ತೆ ಮಧ್ಯೆ ನಿಂತಿವೆ, ಏಕಕಾಲದಲ್ಲಿ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ನೆನ್ನೆ (ಜೂನ್ 16) ರಾತ್ರಿ ಸುಮಾರು 11 ಗಂಟೆ ಸುಮಾರಿಗೆ, ದೇವಸ್ಥಾನ ಹತ್ತಿರದ ಹೇರ್‌ಪಿನ್ ತಿರುವಿನಲ್ಲಿ ಲಾರಿಯ ಆಕ್ಸಲ್ ಕಟ್ ಆಗಿ ನಿಂತಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಎರಡೂ ದಿಕ್ಕಿನಿಂದ ಘಾಟ್ ಹತ್ತುತ್ತಿದ್ದ ಮತ್ತು ಇಳಿಯುತ್ತಿದ್ದ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿವೆ.
ವಾಹನ ಸವಾರರ ಪರದಾಟ:
ಮಧ್ಯರಾತ್ರಿಯಿಂದಲೇ ನೂರಾರು ವಾಹನಗಳು ನಿಂತಿದ್ದು, ಚಾಲಕರು ಹಾಗೂ ಪ್ರಯಾಣಿಕರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಆಸ್ಪತ್ರೆಗಳಿಗೆ ಹೋಗುವವರು, ದೂರದ ಊರಿನಿಂದ ಬಂದ ಪ್ರಯಾಣಿಕರು, ಹಾಗೂ ಸರಕು ಸಾಗಣೆ ಡ್ರೈವರುಗಳು ಪರದಾಡಿದ್ದಾರೆ.
ಹುಲಿಕಲ್ ಘಾಟಿ ರಸ್ತೆಯಲ್ಲಿ ಈಗಾಗಲೇ ಪ್ರಸ್ತುತ ಹುಲಿಕಲ್ ಘಾಟಿಗೆ ಮುಂಚಿತವಾಗಿ ಒಂದು ಚೆಕ್ ಪೋಸ್ಟ್ ಹಾಗೆಯೇ ಮುಗಿದ ತಕ್ಷಣ ಹೊಸಂಗಡಿಯಲ್ಲಿ ಚೆಕ್ ಪೋಸ್ಟ್ ಇದೆ ಆದರೆ ಸಾವಿರಾರು ಪ್ರಯಾಣಿಕರು ರಾತ್ರಿಯೆಲ್ಲಾ ಪರದಾಡು ವಂತಾದರೂ ಶೀಘ್ರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಆಗುತ್ತಿಲ್ಲ ಎಂಬುದು ನೊಂದ ಪ್ರಯಾಣಿಕರ ಮತ್ತು ಸ್ಥಳೀಯರ ಪ್ರಶ್ನೆ.
ಚೆಕ್‌ಪೋಸ್ಟ್‌ಗಳಿದ್ದರೂ , ಈ ರೀತಿಯ ತುರ್ತು ಪರಿಸ್ಥಿತಿಗೆ ಸ್ಪಂದಿಸುವ ವ್ಯವಸ್ಥೆಗಳು ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂಬ ಆಕ್ರೋಶ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
Read More
ಹೊಸನಗರ ; ಭಾರಿ ಪ್ರಮಾಣದ ಭೂ ಕುಸಿತ, ಆತಂಕದಲ್ಲಿ ಗ್ರಾಮಸ್ಥರು
Google Pay ಮತ್ತು PhonePe ಬಳಸುವವರಿಗೆ ಇಲ್ಲಿದೆ ಬಿಗ್ ಅಪ್ಡೇಟ್ !
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.