ಹೊಸನಗರ ; ಬಂಗಾರಮಕ್ಕಿ ವೀರಾಂಜನೇಯ ದೇವಸ್ಥಾನದ ಆವರಣದಲ್ಲಿ ಮಾರ್ಚ್ 31ರಿಂದ ಏಪ್ರಿಲ್ 12ರವರೆಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳ ನಡುವೆ ಶ್ರೀ ವೀರಾಂಜನೇಯ ದೇವರ ಪ್ರತಿಷ್ಠಾಷ್ಟಬಂಧ ನೂತನ ಗೋಪುರ, ಸ್ವರ್ಣಮಯ ಕಲಶ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪ್ರತಿಷ್ಠಾಪನೆ ನೂತನ ಮಹಾಗಣಪತಿ ಸನ್ನಿಧಿ ಚೌಡೇಶ್ವರಿ ಸನ್ನಿಧಿ ನಿರ್ಮಾಣ ಹಾಗೂ ಗುರೂಜಿಯವರ ಪೀಠಾರೋಹಣದ ರಜತ ಮಹೋತ್ಸವ ಮಹಾ ಕಾರ್ಯಕ್ಕೆ ಹೊಸನಗರದ ಗಂಗಾಧರೇಶ್ವರ ದೇವಸ್ಥಾನ ಕಮಿಟಿಯ ಎಲ್ಲ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಆಗಮಿಸಬೇಕೆಂದು ಬಂಗಾರಮಕ್ಕಿಯ ವಿಶ್ವ ವೀರಾಂಜನೇಯ ಮಹಾ ಸಂಸ್ಥಾನಮ್ ಹೇಮಪುರ ಮಹಾ ಪೀಠದ ಮಾರುತಿ ಗುರೂಜಿ ಆಹ್ವಾನ ಪತ್ರಿಕೆ ನೀಡಿ ಎಲ್ಲ ಭಕ್ತಾರನ್ನು ಕರೆ ತರುವಂತೆ ಕೇಳಿಕೊಂಡರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.