ಶ್ರುತಪಂಚಮಿ ಆಚರಣೆ | ಜೈನಧರ್ಮ ಸಿದ್ಧಾಂತಗಳು ಜೀವನ ಮೌಲ್ಯಗಳನ್ನು ವರ್ಧಿಸುತ್ತದೆ ; ಹೊಂಬುಜ ಶ್ರೀಗಳು

Written by Mahesh Hindlemane

Published on:

ರಿಪ್ಪನ್‌ಪೇಟೆ ; ಜೈನಧರ್ಮ ತತ್ವಗಳು, ಸಿದ್ಧಾಂತಗಳು ಆಚಾರ್ಯರಾದ ಭೂತಬಲಿ ಪುಷ್ಪದಂತದಿಂದ ಲಿಪಿರೂಪದಲ್ಲಿ ದಾಖಲಾದ ಸುದಿನವನ್ನು ಶ್ರುತಪಂಚಮಿ ಎಂಬುದಾಗಿ, ಶ್ರುತಸ್ಕಂಧ ಆರಾಧನೆಯ ಮೂಲಕ ಪುನರಪಿ ಸ್ವಾಧ್ಯಾಯ ಮಾಡುವ ಸಂಕಲ್ಪ ತಳೆಯಬೇಕು ಎಂದು ಹೊಂಬುಜ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ಮೇ. 31ರ ಶನಿವಾರದಂದು ನಡೆದ ಶ್ರುತಪಂಚಮಿ ಪೂಜಾ ವಿಧಿಗಳ ಬಳಿಕ ಪ್ರವಚನದಲ್ಲಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಜ್ಯೇಷ್ಠ ಶುಕ್ಲ ಪಂಚಮಿಯಂದು ಲಿಪಿಬದ್ಧ ಜೈನಧರ್ಮ ಗ್ರಂಥಗಳು ಲೋಕಾರ್ಪಣೆಗೊಂಡ ಸ್ಮರಣೆಗಾಗಿ ಜಿನವಾಣಿ ಶ್ರೀ ಸರಸ್ವತಿ ದೇವಿ ಆರಾಧನೆ, ಶ್ರುತಸ್ಕಂದ ಪೂಜೆ ನೆರವೇರಿಸುವ ಪೂರ್ವ ಪರಂಪರೆಯ ಐತಿಹ್ಯವನ್ನು ಶ್ರೀಗಳು ವಿವರಿಸಿದರು.

ಪ್ರತಿಯೋರ್ವರು ಸ್ವಾಧ್ಯಾಯ ಮಾಡುವುದರಿಂದ ಜ್ಞಾನ ಸಂಪತ್ತನ್ನು ವೃದ್ಧಿಸಿ ಜೀವನ ಮೌಲ್ಯಗಳನ್ನು ಧರ್ಮಪ್ರಜ್ಞೆಯಿಂದ ಸಂವರ್ಧಿಸಬೇಕು ಎಂದು ಹರಸಿದರು.

ಅಂದು 20 ವಿದ್ಯಾರ್ಥಿಗಳಿಗೆ ವ್ರತೋಪದೇಶ ನೀಡುತ್ತಾ, ಅಹಿಂಸಾಭಾವದ ಮರ್ಮವನ್ನರಿತು ಜೀವನ ನಿರ್ವಹಿಸಿದಾಗ ಜ್ಞಾನಸಂಪನ್ನರಾಗಿ ಜೀವನ ಮೌಲ್ಯಗಳನ್ನು ವರ್ಧಿಸಿದಂತಾಗುತ್ತದೆ ಎಂಬುದನ್ನು ಸ್ವಸ್ತಿಶ್ರೀಗಳವರು ಹಿಂಸಾಪ್ರವೃತ್ತಿಯನ್ನು ತ್ಯಜಿಸಿ, ಅಹಿಂಸಾ ಮನೋಧರ್ಮ ಪಥವನ್ನು ಅನುಸರಿಸುವುದು ಶ್ರೇಯಸ್ಕರ ಎಂದು ಆಶೀರ್ವದಿಸಿದರು.

ಶ್ರೀಕ್ಷೇತ್ರ ಹೊಂಬುಜದ ಭಗವಾನ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಅಭೀಷ್ಠವರ ಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರುತಸ್ಕಂಧ ಆರಾಧನೆಯ ಆಗಮೋಕ್ತ ವಿಧಾನದಲ್ಲಿ ನೆರವೇರಿಸಲಾಯಿತು. ಶ್ರೀ ಸರಸ್ವತಿ ದೇವಿ ಆರಾಧನೆ, ಜಿನವಾಣಿ-ಶ್ರುತಸ್ಕಂದ ಪೂಜೆ, ಧವಳತ್ರಯ ಗ್ರಂಥಗಳ ಪಲ್ಲಕ್ಕಿ ಉತ್ಸವ ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ದೇವಿ ವಿಶೇಷ ಅಲಂಕಾರ ಮಹಾಪೂಜೆಗಳು ಸ್ವಸ್ತಿಶ್ರೀಗಳ ಸಾನಿಧ್ಯದಲ್ಲಿ ನೆರವೇರಿತು. ಅಂದು ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವು ನೆರವೇರಿತು.

ಹುಂಚ ಜೈನ ಸಮಾಜ, ಪದ್ಮಾವತಿ ಮಹಿಳಾ ಸಮಾಜ, ಊರ-ಪರವೂರ ಭಕ್ತಾದಿಗಳು ಶ್ರುತಪಂಚಮಿ ಪರ್ವದಲ್ಲಿ ಪಾಲ್ಗೊಂಡರು.

Leave a Comment