ಚಿಕಾಗೋದಲ್ಲಿ ವಿಶ್ವ ಜೈನಧರ್ಮ ಸಮಾವೇಶ-2025 | ವಿಶ್ವ ಭ್ರಾತೃತ್ವ, ಧರ್ಮಸಮನ್ವಯತೆ ಸಾರುವ ಜೈನಧರ್ಮ ; ಹೊಂಬುಜ ಶ್ರೀ

Written by Mahesha Hindlemane

Published on:

ರಿಪ್ಪನ್‌ಪೇಟೆ : “ದ್ವೇಷ-ಅಸೂಯೆ ತ್ಯಜಿಸಿ ತಾವಿರುವ ರಾಷ್ಟ್ರದ ಪ್ರಗತಿಗೆ ಪೂರಕ ಸಹಕಾರ-ಸಹಾಯ ಮಾಡುವುದು ಮಾನವಧರ್ಮ ಮೂಲ ಸತ್ಯವಾಗಿದೆ. ವಿಶ್ವದಲ್ಲೆಲ್ಲ ಸಂಘರ್ಷ, ಗೊಂದಲ, ವಿಚಲಿತರನ್ನಾಗಿ ಮಾಡುತ್ತದೆ” ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಪ್ರವಚನದಲ್ಲಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಅವರು ಅಮೇರಿಕಾದ ಚಿಕಾಗೋ ನಗರದಲ್ಲಿ ಆಯೋಜಿಸಿದ್ದ ವಿಶ್ವ ಜೈನಧರ್ಮ ಸಮ್ಮೇಳನ-2025 ಸಮಾವೇಶದಲ್ಲಿ ಪ್ರಧಾನ ಪ್ರವಚಕರಾಗಿ ಹೇಳಿದರು.

ವಿಶ್ವ ಭ್ರಾತೃತ್ವ, ಧರ್ಮ ಸಮನ್ವಯತೆ ಸಾರುವ ಜೈನಧರ್ಮ ತತ್ವಗಳು ಮಾನವ ಕಲ್ಯಾಣದ ಧರ್ಮದಾರಿದೀಪಗಳಾಗಿವೆ. ಸರಳ, ಸಾತ್ವಿಕ, ಶಾಕಾಹಾರ ಮನೋಧರ್ಮವು ವಿಶ್ವಶಾಂತಿಗೆ ತಳಹದಿಯಾಗುವುದು ನಿಶ್ಚಿತ ಎಂದು ಮಹಾವೀರ ತೀರ್ಥಂಕರರು ಬೋಧಿಸಿದ ಉಪದೇಶಗಳ ಬಗ್ಗೆ ವ್ಯಾಖ್ಯಾನ ಮಾಡಿದರು.

ವಿವಿಧ ಧಾರ್ಮಿಕ ಗುರುಗಳ, ವಿದ್ವಾಂಸರ ಭೇಟಿ ಮಾಡಿ ಧರ್ಮ ಚರ್ಚೆ-ವಿಚಾರ ವಿನಿಮಯ ಮಾಡಿದರು. ಧರ್ಮಸಂವಾದದಲ್ಲಿ ಅನೇಕ ಜಿಜ್ಞಾಸೆಗಳನ್ನು ಪರಿಹರಿಸಿದರು. ಪರಮಪೂಜ್ಯ ಶ್ರೀಗಳವರು ‘ಪ್ರತಿಯೋರ್ವರೂ ಪ್ರಕೃತಿಯ ಆರಾಧಕರಾಗಿ ನಿಸರ್ಗದ ಸಂಪತ್ತನ್ನು, ಹಸಿರು ವನಗಳನ್ನು ಸಂರಕ್ಷಿಸುವುದು ಆರೋಗ್ಯ ರಕ್ಷಣೆಯ ಮಹತ್ವದ ಅಂಶ’ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಗುರು ಆಚಾರ್ಯ ಡಾ. ಲೋಕೇಶ್ ಮುನಿ, ಧರ್ಮಸ್ಥಳದ ಸುರೇಂದ್ರಕುಮಾರ್, ಅನಿತಾ ಸುರೇಂದ್ರ ಕುಮಾರ್‌ ಭಾಗವಹಿಸಿದ್ದರು.

Leave a Comment