Karnataka Rain | ಕೇರಳಕ್ಕೆ (Kerala) ಮುಂಗಾರು (Monsoon) ಆಗಮಿಸಿರುವ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯದಲ್ಲೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
ಮುಂಗಾರು ಆರಂಭವಾಗುತ್ತಿರುವ ಹಿನ್ನೆಲೆ ಬೆಂಗಳೂರು (Bangalore), ಬೆಂಗಳೂರು ಗ್ರಾಮಾಂತರ (Bangalore Rural), ರಾಮನಗರ (Ramanagara), ಶಿವಮೊಗ್ಗ (Shivamogga), ತುಮಕೂರು (Thumakuru), ಉಡುಪಿ (Udupi), ದಕ್ಷಿಣ ಕನ್ನಡ (Dakshina Kannada) ಮತ್ತು ಉತ್ತರ ಕನ್ನಡ (Utthara Kannada) ಜಿಲ್ಲೆಗಳಿಗೆ ನಾಳೆಯಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ನಾಳೆಯಿಂದ ಐದು ದಿನಗಳ ಕಾಲ ಭಾರೀ ಪ್ರಮಾಣದಲ್ಲಿ ಬಿರುಗಾಳಿ ಸಹಿತ ಮಳೆಯ ಎಚ್ಚರಿಕೆ ನೀಡಲಾಗಿದ್ದು ಜೂನ್ 3ರ ಹೊತ್ತಿಗೆ ಮುಂಗಾರು ಉತ್ತರ ಒಳನಾಡು ಪ್ರವೇಶಿಸುವ ಸಾಧ್ಯತೆ ಇದ್ದು, ಕೊಪ್ಪಳ, ರಾಯಚೂರು, ವಿಜಯಪುರ, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
Read More
Loksabha Election Results | ಮತ ಎಣಿಕೆಗೆ ಸಕಲ ಸಿದ್ದತೆ ; ಶಿವಮೊಗ್ಗ ಡಿಸಿ ಗುರುದತ್ತ ಹೆಗಡೆ