ಜು.22 ರಂದು ಕೆಂಚನಾಲ ಮಾರಿಕಾಂಬ ಜಾತ್ರೆ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇತಿಹಾಸ ಪ್ರಸಿದ್ದ ಕೆಂಚನಾಲ ಮಾರಿಕಾಂಬ ಜಾತ್ರಾ ಮಹೋತ್ಸವವು ಜುಲೈ 22 ರಂದು ಮಂಗಳವಾರ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ವರ್ಷದಲ್ಲಿ ಎರಡು ಬಾರಿ ಆಚರಿಸುವ ಈ ಜಾತ್ರಾ ಮಹೋತ್ಸವವು ಮಳೆಗಾಲದಲ್ಲಿ ಮಂಗಳವಾರ, ಬೇಸಿಗೆಯಲ್ಲಿ ಬುಧವಾರದಂದು ಆಚರಿಸುವುದು ವಿಶೇಷವಾಗಿದೆ.

ಮಲೆನಾಡಿನಲ್ಲಿ ಕೆಂಚನಾಲ ಮಾರಿಜಾತ್ರೆ ಬರುತ್ತದೆ ಎಂದಾಕ್ಷಣ ಇಲ್ಲಿನ ರೈತಾಪಿ ವರ್ಗ ಭರದ ಸಿದ್ದತೆಯಲ್ಲಿ ಜಾತ್ರೆಗೆ ಮುನ್ನವೇ ಕೃಷಿ ಚಟುವಟಿಕೆಯನ್ನು ಮುಗಿಸಿಕೊಳ್ಳುವುದು ವಾಡಿಕೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೇವಲ ಮೂರ್ನಾಲ್ಕು ತಿಂಗಳಲ್ಲಿ ಹೊಸ ತಳಿಯ ಭತ್ತ ಬೇಗ ಬರುವ ಕಾರಣ ನಾಟಿಯನ್ನು ವಿಳಂಬ ಮಾಡಿ ಜಾತ್ರೆ ಮುಗಿದ ಮೇಲೆ ಮಾಡುತ್ತಾರೆ ಹಾಗೂ ದೇವಿಗೆ ಹರಕೆ ಮಾಡಿಕೊಂಡ ಆರು ತಿಂಗಳಲ್ಲಿ ಇಷ್ಟಾರ್ಥವನ್ನು ದಯಪಾಲಿಸುವ ತಾಯಿ ಮಾರಿಕಾಂಬೆಗೆ, ಕಂಕಣಭಾಗ್ಯ, ಸಂತಾನ ಭಾಗ್ಯಕ್ಕಾಗಿ ಹೀಗೆ ತಮ್ಮ ಕಷ್ಟ ಕಾರ್ಪಣ್ಯ ಈಡೇರಿಕಾಗಿ ಬೇಡಿ ಬರುವ ಭಕ್ತರ ಅಶೋತ್ತರಗಳನ್ನು ಪರಿಹರಿಸುವ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿದೆ.

ಜುಲೈ 22 ರಂದು ಬೆಳಗ್ಗೆ 6 ರಿಂದ ದೇವಿಗೆ ವಿಶೇಷ ಪೂಜೆ ಪ್ರಾರಂಭವಾಗಿ ಸಂಜೆಯವರೆಗೂ ಪೂಜಾ ಕೈಂಕರ್ಯಗಳು ಜರುಗುತ್ತದೆ. ಈ ದೇವಿಯ ಜಾತ್ರಾ ಮಹೋತ್ಸವಕ್ಕೆ ನಾಡಿನ ವಿವಿಧಡೆಗಳಿಂದ ಭಕ್ತರ ಸಮೂಹ ಭಾಗವಹಿಸಿ ಹರಕೆ, ಹಣ್ಣು-ಕಾಯಿ ಸಮರ್ಪಿಸಿ ದೇವಿಯ ದರ್ಶನಾಶೀರ್ವಾದ ಪಡೆಯುವಂತೆ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment