ಧರೆ ಕುಸಿತದಿಂದ ಸಂಪರ್ಕ ಕಡಿತಗೊಳ್ಳುವ ಆತಂಕ, ಘಟನಾ ಸ್ಥಳಕ್ಕೆ ಮಾಜಿ ಸಚಿವ ಕಿಮ್ಮನೆ ಭೇಟಿ, ಪರಿಶೀಲನೆ

Written by malnadtimes.com

Published on:

RIPPONPETE | ಕಳೆದ ಕೆಲ ದಿನಗಳಿಂದ ಮಲೆನಾಡಿನಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಬಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮೈಥಳ್ಳಿ – ಹುಲುಗಾರು ಸಂಪರ್ಕದ ರಸ್ತೆಯಲ್ಲಿ ಧರೆ ಕುಸಿದು ಸಂಪರ್ಕ ರಸ್ತೆ ಕಡಿತಗೊಳ್ಳುವ ಆತಂಕ ಸಾರ್ವಜನಿಕರಲ್ಲಿ ಮೂಡಿದ್ದು ಇಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

WhatsApp Group Join Now
Telegram Group Join Now
Instagram Group Join Now

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಮತ್ತೆ ಕ್ಷೀಣಿಸಿದ ವರುಣ ! ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕ್ಷೇತ್ರದ ಶಾಸಕನಾಗಿದ್ದಾಗ 1.65 ಕೋಟಿ ರೂ. ಹಣವನ್ನು ಸಂಪರ್ಕ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ ರಸ್ತೆ ಅಭಿವೃದ್ದಿ ಮಾಡಿಸಲಾಗಿದ್ದು, ಈ ಸಂಪರ್ಕ ರಸ್ತೆಯಿಂದಾಗಿ ಸುತ್ತಮುತ್ತಲಿನ ನಾಗರೀಕರು, ಶಾಲಾ-ಕಾಲೇಜ್, ಅಂಗನವಾಡಿ ಮಕ್ಕಳು ಓಡಾಡಲು ಅನುಕೂಲವಾಗಿತ್ತು. ಆದರೆ ಕಳೆದ ವರ್ಷ ಸಹ ಮಳೆಗಾಲದಲ್ಲಿ ಧರೆ ಕುಸಿದು ಅಡಿಕೆ ತೋಟ ಮತ್ತು ಭತ್ತ ಗದ್ದೆಗಳು, ಜಮೀನುಗಳಿಗೆ ಹಾನಿಯಾಗಿತ್ತು. ಆದರೂ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರರವರು ಬರೀ ವೀಕ್ಷಣೆ ಮಾಡಿದ್ದು ಬಿಟ್ಟರೆ ಅಭಿವೃದ್ದಿಗೆ ಅನುದಾನವನ್ನು ಕೊಡಿಸಿಲ್ಲ ಎಂದು ಆರೋಪಿಸಿದ ಅವರು, ತಾಲ್ಲೂಕಿನ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳು ಉದ್ಘಾಟನೆಯಾಗಿ ವರ್ಷವಾಗುವ ಮುನ್ನವೇ ಸೋರುವಂತಾಗಿವೆ. ನಾನು ಗಾರೆ ಮೇಸ್ತ್ರಿನಾ ? ಎಂದು ಹೇಳುವ ಶಾಸಕ ಆರಗ ಜ್ಞಾನೇಂದ್ರ ಹಾಗಾದರೆ ಆವರ ಜವಾಬ್ದಾರಿ ಏನು ? ಎಂಬ ಅರಿವು ಇಲ್ಲದವರಂತೆ ಮಾತನಾಡುತ್ತಾರೆ ನಾಚಿಕೆಯಾಗಬೇಕ್ರಿ ಅವರಿಗೆ ಎಂದು ಕಿಡಿಕಾರಿದರು.

ಮೋದಿ ಸರ್ಕಾರ ಶೀಘ್ರ ಪತನ !

ಹಳ್ಳ ದಾಟುವಾಗ ಕಾಲುಜಾರಿ ಬಿದ್ದು ವ್ಯಕ್ತಿ ಸಾವು !

ಕೇಂದ್ರ ನರೇಂದ್ರ ಮೋದಿ ಸರ್ಕಾರ ಶೀಘ್ರದಲ್ಲಿ ಪತನವಾಗುವುದೆಂದು ಭವಿಷ್ಯ ನುಡಿದ ಮಾಜಿ ಸಚಿವರು, ಕರ್ನಾಟಕ ರಾಜ್ಯಕ್ಕೆ ಬಜೆಟ್‌ನಲ್ಲಿ ತಾರತಮ್ಯ ನೀತಿ ಅನುಸರಿಸಿದ್ದಾರೆಂದು ಹೇಳುವ ಮೂಲಕ ಮಲತಾಯಿ ಧೋರಣೆ ತೋರುತ್ತಿದ್ದಾರೆಂದು ಲೇವಡಿ ಮಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸರ್ವಜನಾಂಗದವರ ಶ್ರೇಯೋಭಿವೃದ್ದಿಗಾಗಿ ಹಲವು ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿ ಸಾಮಾನ್ಯ ಜನರ ಪಕ್ಷವಾಗಿ ಹೊರಹೊಮ್ಮಿದೆ ಎಂದು ತಿಳಿಸಿ, ಮಾಧ್ಯಮದವರ ದೃಷ್ಟಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆಂದು ಹೇಳುತ್ತಿದ್ದು ಯಾರು ಬದಲಾಗುವುದಿಲ್ಲ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಅವಧಿ ಪೂರ್ಣಗೊಳಿಸುತ್ತದೆಂದು ಹೇಳಿದ ಅವರು, ಮುಂಬರುವ ದಿನಗಳಲ್ಲಿ ನಾನು ಕೇಂದ್ರ ಸರ್ಕಾರ ಮತ್ತು ಶಾಸಕ ಆರಗ ಜ್ಞಾನೇಂದ್ರರವರ ಜನವಿರೋಧಿ ವಿರುದ್ದ ತೀರ್ಥಹಳ್ಳಿಯಿಂದ ಪಾದಯಾತ್ರೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವುದಾಗಿ ವಿವರಿಸಿದರು.

ತಾಲ್ಲೂಕು ಪಂಚಾಯ್ತಿ ಪ್ರಭಾರಿ ಇಓ ನರೇಂದ್ರ ಕುಮಾರ್ ಸ್ಥಳದಲ್ಲಿದ್ದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ರವರಿಗೆ ಈಗಾಗಲೇ ಮೈಥಳ್ಳಿ ತುರ್ತಾಗಿ ಸಂಪರ್ಕ ಕಡಿತಗೊಳ್ಳದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ಬಗ್ಗೆ ವಿವರಿಸಿ, ಮಾಜಿ ಸಚಿವರು ಪ್ಲಾನ್ ಅಂಡ್ ಎಸ್ಟಿಮೆಂಟ್ ಮಾಡಿ ಕಳುಹಿಸಿರುವ ಪ್ರತಿಯನ್ನು ನನಗೆ ಕೊಡಿ ನಾನು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಮಧು ಬಂಗಾರಪ್ಪನವರ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಜೊತೆ ಚರ್ಚಿಸಿ ತುರ್ತಾಗಿ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡುವುದಾಗಿ ಭರವಸೆ ವ್ಯಕ್ತಪಡಿಸಿದರು.

Karnataka Rain : ಇಂದು ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ, ಇನ್ನೆಷ್ಟು ದಿನ ಮಳೆಯಾಗಲಿದೆ ?

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿಗೌಡ, ಮುಡುಬ ರಾಘವೇಂದ್ರ, ಆದರ್ಶ ಹುಂಚದಕಟ್ಟೆ, ಹುಂಚ ಹೋಬಳಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುಣಕಲ್ಲು ಗುರುರಾಜ, ಕೋಡೂರು ಗ್ರಾಪಂ ಅಧ್ಯಕ್ಷ ಉಮೇಶ್, ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮಸ್ಥರು, ಪಕ್ಷದ ಮುಖಂಡರು ಹಾಜರಿದ್ದರು.

Leave a Comment