ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಖಚಿತ – ಶಾಸಕ ಗೋಪಾಲಕೃಷ್ಣ ಬೇಳೂರು

Written by Koushik G K

Updated on:

ಶಿವಮೊಗ್ಗ ; ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಡೆದ ಲೋಕಸಭಾ ಚುನಾವಣೆಯಲ್ಲಿ ಕಳ್ಳ ಮತದಾನದ ಮೂಲಕ ಗೆದ್ದಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಗಂಭೀರ ಆರೋಪ ಮಾಡಿದ್ದು, ಚುನಾವಣೆ ಪ್ರಕ್ರಿಯೆಯ ಮೇಲೆ ದೊಡ್ಡ ಪ್ರಶ್ನೆ ಹಾಕಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಲೋಕಸಭಾ ಚುನಾವಣೆಯಲ್ಲಿ ಅಕ್ರಮಗಳು ನಡೆದಿಲ್ಲ ಎಂದು ಹೇಳಲಾಗದು. ಖಂಡಿತವಾಗಿಯೂ ಅಕ್ರಮ ನಡೆದಿದೆ ಎಂಬ ನಂಬಿಕೆ ನನಗಿದೆ. ಇಲ್ಲವಾದರೆ ಬಿಜೆಪಿ ಇಷ್ಟು ಸೀಟು ಗೆಲ್ಲುತ್ತಿರಲಿಲ್ಲ,” ಎಂದರು.

ಚುನಾವಣೆ ಆಯೋಗದ ನಿಷ್ಠೆ ಪ್ರಶ್ನೆ:

ಬೇಳೂರು ಅವರು ರಾಹುಲ್ ಗಾಂಧಿಯವರ ಹೇಳಿಕೆಗೆ ಬೆಂಬಲ ನೀಡಿದ್ದು, “ರಾಜ್ಯ ಚುನಾವಣಾ ಆಯೋಗದ ನಿಷ್ಠೆ ಕುರಿತಾಗಿ ಗಂಭೀರ ಅನುಮಾನಗಳು ಹುಟ್ಟಿವೆ. ರಾಹುಲ್ ಗಾಂಧಿಯವರು ಈ ಕುರಿತು ಮಾಡಿರುವ ಆರೋಪಗಳು ತೀವ್ರವಾಗಿವೆ ಮತ್ತು ಅವು ಕಡೆಗಣಿಸಬಾರದಷ್ಟು ಮಹತ್ವಪೂರ್ಣ,” ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಕಳ್ಳ ಮತದಾನದಿಂದಲೇ ಗೆದ್ದಿರೋದು.

ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದರೆಂದು ಬಿಜೆಪಿ ಆರೋಪಿಸಿದೆ. ಆದರೆ ಇಂದಿನ ಮೋದಿ ಸರ್ಕಾರವೇ ಬೇರೆ ರೀತಿಯಲ್ಲಿ ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಹಾಕಿದೆ. ಇಡೀ ವ್ಯವಸ್ಥೆ – ಐಟಿ ಇಲಾಖೆ, ಸಿಬಿಐ, ಇಡಿ – ಎಲ್ಲವೂ ಕೇವಲ ಕೇಂದ್ರ ಸರ್ಕಾರದ ಕೈಯಲ್ಲಿವೆ,” ಎಂದು ಹೇಳಿದರು.

ಆಗಸ್ಟ್ 8ರಂದು ಬೃಹತ್ ಪ್ರತಿಭಟನೆ:

ಆಗಸ್ಟ್ 8ರಂದು ಕೇಂದ್ರ ಮತ್ತು ರಾಜ್ಯದ ಕಾಂಗ್ರೆಸ್ ನಾಯಕರು ಚುನಾವಣಾ ಅಕ್ರಮಗಳ ವಿರುದ್ಧ ಹಾಗೂ ಚುನಾವಣಾ ಆಯೋಗದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಿದ್ದು, “ಈ ಹೋರಾಟಕ್ಕೆ ಎಲ್ಲರ ಸಹಕಾರವಿರಬೇಕು,” ಎಂದು ಗೋಪಾಲಕೃಷ್ಣ ಬೇಳೂರು ಕರೆ ನೀಡಿದ್ದಾರೆ.

ತಾಳಗುಪ್ಪ – ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸಮಯದಲ್ಲಿ ಬದಲಾವಣೆ – ನೂತನ ವೇಳಾಪಟ್ಟಿ ಪ್ರಕಟ

Leave a Comment