ಇದೀಗ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವು ತೀವ್ರ ಸ್ವರೂಪ ಪಡೆದಿರುವುದರಿಂದ ಭಾರತದ ಅಡುಗೆ ಅನಿಲ (LPG) ಪೂರೈಕೆಯ ಮೇಲೆ ನೇರ ಪರಿಣಾಮ ಬೀರಬಹುದು ಎಂಬ ಆತಂಕ ಉಂಟಾಗಿದೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಬೆದರಿಕೆ ಇರುವುದರಿಂದ, ತೈಲ ಮತ್ತು ಗ್ಯಾಸ್ ಪೂರೈಕೆ ವ್ಯವಸ್ಥೆಯ ಮೇಲೆ ದೊಡ್ಡ ಹೊಡೆತ ಬೀಳಬಹುದು.
ಭಾರತಕ್ಕೆ LPG ಪೂರೈಕೆ ಬಿಕ್ಕಟ್ಟಿನ ಸಾಧ್ಯತೆ:
ಈ ಜಲಸಂಧಿಯ ಮೂಲಕವೇ ಜಗತ್ತಿನ 20% ಕಚ್ಚಾ ತೈಲ ಸಾಗಣೆ ನಡೆಯುತ್ತದೆ. ಭಾರತ ಇಂಧನದ ಬಹುಭಾಗವನ್ನು ಇರಾನ್, ಸೌದಿ, ಕತಾರ್ ಮತ್ತು ಯುಎಇ ನಂತಹ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ. ಈ ಪ್ರದೇಶದಲ್ಲಿ ಉದ್ಭವಿಸಿದ ತೀವ್ರತೆ ಭಾರತದ ಪೂರೈಕೆಯಲ್ಲಿ ಅಡೆತಡೆಯಾಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ.
ಅಡುಗೆ ಅನಿಲ ಪೂರೈಕೆ ಕೇವಲ ಇನ್ನೂ 16 ದಿನಗಳಷ್ಟೇ?
ಭಾರತದಲ್ಲಿ ಸದ್ಯಕ್ಕೆ ಶೇ.60ಕ್ಕೂ ಹೆಚ್ಚು LPG ಪೂರೈಕೆ ಪರವಾನಗಿ ಹೊಂದಿರುವ ಕಂಪನಿಗಳು ಗಲ್ಫ್ ರಾಷ್ಟ್ರಗಳ ಆಧಾರದಲ್ಲಿವೆ. ಹೀಗಾಗಿ ಯುದ್ಧವು ಮುಂದುವರೆದರೆ, ಇದೀಗ ಇನ್ನು ಕೇವಲ 16 ದಿನಗಳಷ್ಟು ಮಾತ್ರ ರಿಸರ್ವ್ ಸೀಲಿಂಡರ್‌ಗಳು ಉಳಿದಿರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳುತ್ತಿವೆ.
ಅಮೆರಿಕ ಪ್ರವೇಶ:ಈ ಮಧ್ಯೆ ಅಮೆರಿಕ ಈ ಯುದ್ಧದಲ್ಲಿ ನೇರವಾಗಿ ಪ್ರವೇಶಿಸಿದ್ದು, ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ಯುದ್ಧಕ್ಕೆ ತಕ್ಷಣ ಕೊನೆ ಬಾರದಿದ್ದರೆ ಇಂಧನ ಬೆಲೆಗಳು ಆಕಾಶಕ್ಕೆ ಏರೋದು ನಿಶ್ಚಿತ.
Read More : ಜುಲೈ 1 ರಿಂದ ಹೊಸ ನಿಯಮ: ಪ್ಯಾನ್ ಕಾರ್ಡ್ ಪಡೆಯಲು ಈ ದಾಖಲಾತಿ ಕಡ್ಡಾಯ!
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.