ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಮಹಾಭಿಷೇಕ | ಸಂಘ ಪೂಜೆಯಿಂದ ಆಧ್ಯಾತ್ಮ ಮನೋಬಲ ವೃದ್ಧಿ ; ಹೊಂಬುಜ ಶ್ರೀಗಳು

Written by malnadtimes.com

Published on:

ರಿಪ್ಪನ್‌ಪೇಟೆ ; ಭಗವಾನ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಏಕಶಿಲಾ ಜಿನಬಿಂಬಕ್ಕೆ ಭಕ್ತವೃಂದದವರು ಮಹಾಭಿಷೇಕ ವಾರ್ಷಿಕ ಜಾತ್ರಾ ಮಹೋತ್ಸವದ ಪಂಚಮಿ ದಿನದಂದು ಹೊಂಬುಜದ ಗುಡ್ಡದ ಬಸದಿ ಎಂದೇ ಕರೆಯಲ್ಪಡುವ ತ್ರಿಕೂಟ ಜಿನಾಲಯದಲ್ಲಿ ನೆರವೇರಿತು.

WhatsApp Group Join Now
Telegram Group Join Now
Instagram Group Join Now

ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಪ್ರಾತಃ ಕಾಲದ ನಿತ್ಯವಿಧಿ ಸಹಿತ ಪೂಜಾ ವಿಧಾನಗಳ ಬಳಿಕ ಗಣಾಧಿಪತಿ ಗಣಧರಾಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರ ಸಸಂಘದ ಮುನಿಶ್ರೀಗಳು ಆರ್ಯಿಕಾಯವರ ಸಾನಿಧ್ಯದಲ್ಲಿ ಶಾಸ್ತ್ರೋಕ್ತ ರೀತಿಯಲ್ಲಿ ನೆರವೇರಿತು.

ಜಲ, ಹಾಲು, ಎಳನೀರು, ಇಕ್ಷರಸ, ಕಲ್ಕಚೂರ್ಣ, ಕಷಾಯ, ಚಂದನ, ಅಷ್ಟಗಂಧ, ಕೇಸರಿ, ದ್ರವ್ಯಗಳಿಂದ ಅಭಿಷೇಕವನ್ನು ಭಕ್ತ ಸಮುದಾಯದವರು ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಜಿನಭಜನೆ-ವಾದ್ಯಗೋಷ್ಠಿಗಳೊಂದಿಗೆ ನಡೆದ ಮಹಾಭಿಷೇಕವು ಪುಷ್ಪಾರ್ಚನೆ, ಮಂಗಳಾರತಿಯೊಂದಿಗೆ ಸಂಪನ್ನಗೊಂಡಿತು.

ಶ್ರೀ ಪಾರ್ಶ್ವನಾಥ ಕೀ ಜೈ, ಶ್ರೀ ಪದ್ಮಾವತಿ ಮಾತಾಕೀ ಜೈನ, ಜೈನ ಧರ್ಮ ಕೀ ಜೈ ಜಯಕಾರಗಳು ಕೇಳಿಬಂದಿತು.

ಶ್ರೀ ಬಾಹುಬಲಿ ಸ್ವಾಮಿ ಹಾಗೂ ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿಯೂ ಪೂಜೆ ಸಲ್ಲಿಸಲಾಯಿತು. ತ್ರಿಕೂಟ ಜಿನಾಲಯದ ಶ್ರೀ ಪಾರ್ಶ್ವನಾಥ ಸ್ವಾಮಿಯ ಮಹಾಭಿಷೇಕದಿಂದ ಭಕ್ತರಿಗೆ ಆಧ್ಯಾತ್ಮ ಮನೋಧರ್ಮ ವರ್ಧಿಸುತ್ತದೆ ಎಂದು ಪೂಜ್ಯ ಶ್ರೀಗಳವರು ಆಶೀರ್ವಚನದಲ್ಲಿ ತಿಳಿಸಿದರು.

ಕಂಬದಹಳ್ಳಿಯ ಪರಮಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹಾಗೂ ಕೊಲ್ಹಾಪುರದ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಮಹಾಸ್ವಾಮೀಜಿಯವರು ಉಪಸ್ಥಿತರಿದ್ದರು.

Leave a Comment