HOSANAGARA ; ತಾಲ್ಲೂಕಿನ ಸೊನಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಣೆ ಕಲಾನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಫೆ. 3ರ ಸೋಮವಾರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಾನಾಥೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ನಿವಣೆ ಸುಬ್ಬಾಭಟ್ ತಿಳಿಸಿದರು.
ಅವರು ದೇವಸ್ಥಾನದ ಆವರಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,
ವಿವಾಹವಾಗುವ ಜೋಡಿಗಳಿಗೆ ತಾಳಿ, ಸೀರೆ, ಪಂಚೆ ಶಲ್ಯಗಳನ್ನು ಉಚಿತವಾಗಿ ನೀಡುವುದರ ಜೊತೆಗೆ ವರ ಹಾಗೂ ವಧು ಕುಟುಂಬಗಳಿಗೆ, ಅವರ ಸಂಬಂಧಿಕರಿಗೆ ಹಾಗೂ ಸಾರ್ವಜನಿಕರಿಗೆ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ಕುಟುಂಬಗಳು ತಕ್ಷಣ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಈ ಮೂಲಕ ಕೇಳಿಕೊಂಡರು.
ಉಚಿತ ವಿವಾಹಕ್ಕೆ ಪಾಂಡುರಂಗಭಟ್ ಮೊಬೈಲ್ ನಂಬರ್ 9845781545 ಹಾಗೂ ಹೆಚ್.ಎಸ್.ನಾಗರಾಜ್ ಮೊಬೈಲ್ ನಂಬರ್ 9986654991 ನ್ನು ಸಂಪರ್ಕಿಸಿ ತಕ್ಷಣ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಈ ಮೂಲಕ ಕೇಳಿಕೊಂಡರು.