ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಹರತಾಳು ಹಾಲಪ್ಪ ಆರೋಪದಲ್ಲಿ ಹುರುಳಿಲ್ಲ ; ಮಾಸ್ತಿಕಟ್ಟೆ ಸುಬ್ರಹ್ಮಣ್ಯ

Written by malnadtimes.com

Published on:

HOSANAGARA ; ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಮಾಫಿಯಾವಾಗಿ ರೂಪುಗೊಂಡಿದೆ ಎಂದು ಮಾಜಿ ಶಾಸಕ ಹರತಾಳು ಹಾಲಪ್ಪ ಅವರು ಆರೋಪಿಸಿರುವುದರ ಹಿಂದೆ ರಾಜಕೀಯ ಹಿತಾಸಕ್ತಿ ಇದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಸ್ತಿಕಟ್ಟೆ ಸುಬ್ರಮಣ್ಯ ಹೇಳಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಇತ್ತೀಚೆಗೆ ಮಾಜಿ ಸಚಿವ ಹಾಲಪ್ಪ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಭೇಟಿಯಾಗಿ, ಹೊಸನಗರದಲ್ಲಿ ನಡೆಯುತ್ತಿರುವ ಮರಳು ಅಕ್ರಮ ದಂಧೆಯನ್ನು ನಿಲ್ಲಿಸುವಂತೆ ಮನವಿ ಸಲ್ಲಿಸಿದ್ದಾರೆ. ಆದರೆ ತಾಲೂಕಿನ ಈಚಲಕೊಪ್ಪ ಗ್ರಾಮದಲ್ಲಿ ಅವರು ಆಪ್ತರಿಗೆ ಸಂಬಂಧಿಸಿದ ಅಕ್ರಮ ಮರಳು ಲಾರಿ ಹಿಡಿದಿರುವ ಪ್ರಕರಣದಿಂದಾಗಿ ಅವರು ದೂರು ನೀಡಿದ್ದಾರೆ. ಅಕ್ರಮ ಮರಳು ದಂಧೆ ಪ್ರಕರಣಗಳು ಹಲವು ಬಾರಿ ದಾಖಲಾದಾಗಲೂ ಮಾತನಾಡದ ಮಾಜಿ ಸಚಿವರು ಈಗ ಯಾಕೆ ದೂರು ನೀಡಲು ಮುಂದಾಗಿದ್ದಾರೆ? ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಶಾಸಕ ಬೇಳೂರು ಗೋಪಾಲಕೃಷ್ಣ ಅವರಜನಪ್ರಿಯತೆಯನ್ನು ಸಹಿಸದೇ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಮಿಥ್ಯಾರೋಪ ಮಾಡಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಬೇಕು ಎನ್ನುವ ಉದ್ದೇಶವಿದೆ ಎಂದರು.

ತಾಲೂಕಿನಲ್ಲಿ ನಡೆಯುತ್ತಿರುವ ಮರಳು ಸಾಗಣೆಯಿಂದ ಲಾರಿ ಮಾಲೀಕರು ಚಾಲಕರು ಸೇರಿದಂತೆ ನೂರಾರು ಯುವಕರಿಗೆ ಉದ್ಯೋಗವಕಾಶ ಲಭ್ಯವಾಗಿದೆ. ಮುಳುಗಡೆ ಹಿನ್ನೀರಿನಲ್ಲಿ ಸಂಗ್ರಹವಾಗುವ ಶಿಲ್ಟ್ ಮರಳನ್ನು ಮಾತ್ರ ಸಾಗಿಸಲಾಗುತ್ತಿದೆ. ಅವರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಇಲ್ಲಿನ ವ್ಯಾಪಾರಿಗಳಿಗೆ ಆರ್ಥಿಕ ಚೈತನ್ಯ ದೊರೆತಿದೆ. ಮರಳು ಸಾಗಿಸುವವರು ಯಾರಿಗೂ ತೊಂದರೆ ಮಾಡುತ್ತಿಲ್ಲ. ಸ್ಥಳೀಯ ನಾಗರಿಕರಿಗೆ ಅಗ್ಗದ ದರದಲ್ಲಿ ಮರಳು ಒದಗಿಸುತ್ತಿದ್ದಾರೆ. ಅಭಿವೃದ್ಧಿಯ ಹಿತದೃಷ್ಠಿಯಿಂದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕಾಳಜಿ ಹೊಂದಿದ್ದಾರೆ. ಮರಳು ಸಾಗಾಟದಿಂದ ಯಾರೊಬ್ಬರಿಗೂ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ. ಅಷ್ಟಾಗಿಯೂ ಮರಳು ಮಾಫಿಯಾ ನಡೆಯುತ್ತಿದೆ ಎನ್ನುವ ಆರೋಪದಲ್ಲಿ ಹುರುಳಿಲ್ಲ ಎಂದು ಅವರು ತಿಳಿಸಿದರು.

ಹಾಲಪ್ಪನವರು ಶಾಸಕರಾಗಿದ್ದಾಗ ಅಕ್ರಮ ಮರಳುಗಾರಿಕೆ ನಡೆದಿಲ್ಲವೇ?

ಎರಡು ವರ್ಷಗಳ ಹಿಂದೆ ಅಕ್ರಮ ಮರಳುಗಾರಿಕೆ ನಡೆಯಲಿಲ್ಲವೇ? ಆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಲಾರಿಗಳ ಮೇಲೆ ಕೇಸ್ ಹಾಕಿಸಿಲ್ಲವೇ? ನಮ್ಮ ಶಾಸಕರು ಯಾವಾಗಲೂ ದ್ವೇಷ ರಾಜಕರಣ ಮಾಡುವವರಲ್ಲ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಎಂದು ಹೇಳುವವರು ಹಾಲಪ್ಪನವರ ಹಾಗೇ ಎಂದು ದ್ವೇಷ ರಾಜಕಾರಣ ಮಾಡಿದವರಲ್ಲ. ಈ ದಿನ ಪತ್ರಿಕಾಘೋಷ್ಠಿ ನಡೆಸುವ ಸಂದರ್ಭದಲ್ಲಿ ಬಿಜೆಪಿಯವರು ಕಾಂಗ್ರೆಸ್‌ನವರು ಎಲ್ಲ ಪಕ್ಷದವರು ಸೇರಿ ಪತ್ರಿಕಾಘೋಷ್ಠಿ ನಡೆಸುತ್ತಿದ್ದೇವೆ ಹಾಗೂ ಎಲ್ಲ ಕುಟುಂಬದವರು ಬದುಕಲಿ ಎಂದು ಹೋರಾಟ ನಡೆಸುತ್ತಿದ್ದೇವೆ ಎಂದರು.

ಗೋಷ್ಠಿಯಲ್ಲಿ ಈಚಲಕೊಪ್ಪ ರವಿ, ಮರಳು ಲಾರಿ ಮಾಲೀಕರಾದ ಧರ್ಮಪ್ಪ ಗೇರುಪುರ, ಸುದೀಪ್, ಉದಯನಾಯ್ಕ್, ಕಾಡಳ್ಳಿ ರಮೇಶ್, ಎಂ.ಜೆ.ಮಹಾಬಲೇಶ್ವರ, ಮಂಜುನಾಥ, ಸಂತೋಷಗೌಡ, ಮಹೇಶ, ನಾಗರಾಜ್ ಮತ್ತಿತರರು ಇದ್ದರು.

Leave a Comment